ತೆಲಂಗಾಣ –
ತರಗತಿಯಲ್ಲಿ ಶಿಕ್ಷಕರು ಹೊಡೆದಿದ್ದಕ್ಕೆ ನೇರವಾಗಿ 2 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲು ಮಾಡಿದ ಘಟನೆ ತಲಂಗಾನ ದಲ್ಲಿ ನಡೆದಿದೆ. ಹೌದು ಕ್ಲಾಸ್ ರೂಮ್ ನಲ್ಲಿ ಶಿಕ್ಷಕರು ಪ್ರೀತಿಯಿಂದ ವಿದ್ಯಾರ್ಥಿಗೆ ಸುಮ್ಮನೆ ಹೊಡೆದಿದ್ದಾರೆಂದುಕೊಂಡು ವಿದ್ಯಾರ್ಥಿ ಪೊಲೀಸ್ ಠಾಣೆಗೆ ಶಿಕ್ಷಕನ ವಿರುದ್ದ ಕೇಸ್ ಕೊಟ್ಟಿದ್ದಾರೆ.

ಹೌದು ತೆಲಂಗಾಣದ ಬಯ್ಯಾರಂ ಮಂಡಲದಲ್ಲಿ ಇದು ನಡೆದಿದೆ.ಬಯ್ಯಾರಂ ಮಂಡಲದ ಖಾಸಗಿ ಶಾಲೆಯ ಎರಡನೆ ತರಗತಿಯ ವಿದ್ಯಾರ್ಥಿ ಅನಿಲ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಇನ್ಸ್ ಪೆಕ್ಟರ್ ಅವರಿಗೆ ದೂರು ನೀಡುವ ವಿಡಿಯೋ ಪೊಟೊ ವೈರಲ್ ಆಗಿದೆ.

ಇನ್ಸ್ಪೆಕ್ಟರ್ ಎಲ್ಲಿಗೆ ಹೊಡೆದರು ಎಂದು ಕೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ.ಬಾಲಕ ಕಾಲಿಗೆ ಹೊಡೆದಿ ದ್ದಾರೆ ಎಂದು ಪ್ರತಿಕ್ರಿಯಿಸಿ ಕ್ರಮಕ್ಕೆ ಆಗ್ರಹಿಸಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು ಬಾಲಕನ ಮುಗ್ದತೆಗೆ ಜನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.ಕೊನೆಗೆ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿ ಇನ್ಸ್ಪೆಕ್ಟರ್ ಬಾಲಕನನ್ನು ಕಳುಹಿಸಿ ಕೊಟ್ಟಿದ್ದಾರೆ.