This is the title of the web page
This is the title of the web page

Live Stream

[ytplayer id=’1198′]

January 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಕೆರೆಯಲ್ಲಿ ಬಿದ್ದು ಮಹಿಳೆ ಸಾವು – ಸಾಲಕ್ಕೇ ಹೆದರಿ ಜೀವ ಬಿಟ್ಟ ಮಹಿಳೆ

WhatsApp Group Join Now
Telegram Group Join Now

ಹುಬ್ಬಳ್ಳಿ –

ಸಾಲಗಾರರ ಕಾಟದಿಂದ ಬೇಸತ್ತ ಮಹಿಳೆಯೊಬ್ಬಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದ ಸರಹದ್ದಿನ ವ್ಯಾಪ್ತಿಯಲ್ಲಿನ ಬುಡ್ನಾಳ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ. ಮಲ್ಲವ್ವ ಶಂಕರ ಸುಣಗಾರ 48 ವರ್ಷದ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ವಯಕ್ತಿಕ ಕೆಲಸ ಕಾರ್ಯಗಳಿಗಾಗಿ ಮಲ್ಲವ್ವ ಅವರು ಸಿಕ್ಕಾಪಟ್ಟಿಯಾಗಿ ಕೈಗಡ ಸಾಲವನ್ನು ಮಾಡಿಕೊಂಡಿದ್ದರಂತೆ . ಇವರ ಕಿರಿಕಿರಿ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಮಲ್ಲವ್ವ ಇಂದು ಅಂಚಟಗೇರಿ ಗ್ರಾಮದ ಸರಹದ್ದಿನ ಬುಡ್ನಾಳ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಆಗಮಿಸಿ ಕೆರೆಯಲ್ಲಿನ ಶವವನ್ನು ಹೊರತಗೆದರು. ಸಧ್ಯ ಈ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಇನ್ನೂ ಸ್ಥಳಕ್ಕೇ ಹುಬ್ಬಳ್ಳಿ ಗ್ರಾಮೀಣ ಇನಸ್ಪೇಕ್ಟರ್ ರಮೇಶ ಗೋಕಾಕ , ಪಿಎಸೈ ಚಾಮುಂಡೇಶ್ವರಿ, ಪೊಲೀಸ್ ಸಿಬ್ಬಂದ್ದಿಗಳಾದ ನಾರಾಯಣ ಹಿರೇಹೋಳಿ, ಡೇವಿಡ್ ಸೇರಿದಂತೆ ಹಲವು ಸಿಬ್ಬಂದಿಗಳು ಪರಿಶೀಲನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk