ಶ್ರೀಕಾಕುಲಂ –
ಸಾಮಾನ್ಯವಾಗಿ ಪೊಲೀಸರು ಅಂದರೆ ಅವರ ಹಾಗೇ ಹೀಗೆ ಅನ್ನೊರೆ ಹೆಚ್ಚು. ದಿನ ಬೆಳಗಾದರೆ ಸದಾ ಯಾವಾಗಲೂ ಆ ಕೆಲಸ ಈ ಕೆಲಸ ಎನ್ನುತ್ತಾ ಬ್ಯೂಜಿಯಾಗಿರುವ ಪೊಲೀಸರು ನಿಜವಾಗಿಯೂ ಗ್ರೇಟ್ ಎನ್ನೊದಕ್ಕೆ ಈ ಸ್ಟೋರಿ ಸಾಕ್ಷಿ.
ಹೌದು ಹೊಲದಲ್ಲಿ ಸತ್ತು ಬಿದ್ದಿದ್ದ ನಿರ್ಗತಿಕ ವ್ಯಕ್ತಿಯೊಬ್ಬರ ಶವವನ್ನು ಹೊರಲು ಗ್ರಾಮಸ್ಥರು ಮುಂದೆ ಬರದ ಹಿನ್ನೆಲೆಯಲ್ಲಿ ಸ್ವತಃ ಮಹಿಳಾ ಎಸ್‌ಐ ಹೆಗಲ ಮೇಲೆ ಹೊತ್ತು 2 ಕಿ.ಮೀ ನಡೆದಿದ್ದು ಐಎಸ್ ಸಿರಿಶಾರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕಾಸಿಬುಗ್ಗದ ಪಾಲಾಸ ಪುರಸಭೆಯ ಅಡವಿ ಕೊಟ್ಟುರು ಗ್ರಾಮದ ಹೊರವಲಯದಲ್ಲಿ 60 ವರ್ಷದ ವೃದ್ಧನೋರ್ವ ಮೃತಪಟ್ಟಿರುವ ವಿಷಯ ತಿಳಿದ ಸಿರಿಶಾ ಅವರು ದಾರಿಹೋಕರ ಸಹಾಯ ದೊಂದಿಗೆ ಶವವನ್ನು ಎರಡು ಕಿಲೋಮೀಟರ್ ದೂರದ ಸ್ಮಶಾನಕ್ಕೆ ಒಯ್ದಿದ್ದರು.
ಅನಾಥಭತ್ತದ ಗದ್ದೆ ಮತ್ತು ಹಗ್ಗು ತಗ್ಗಿನ ರಸ್ತೆಗಳಲ್ಲೇ ಬ್ಯಾಲೆನ್ಸ್ ಮಾಡಿ ಶವವನ್ನು ಹೊತ್ತುಕೊಂಡು ಅಂತಿಮ ಸಂಸ್ಕಾರಕ್ಕಾಗಿ ದೇಹವನ್ನು ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಿದರು.
ಎಸ್‌ಐ ಮಾನವೀಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ. ಸಿರಿಶಾ ಕಳೆದ ಕೆಲವು ವರ್ಷಗಳಿಂದ ತನ್ನ ಸಂಬಳದಿಂದ ಸಾಮಾಜಿಕ ಸೇವೆಗಾಗಿ ಹಣವನ್ನು ದಾನ ಮಾಡುತ್ತಿದ್ದಾರೆ.ಇವರು ಮಾಡಿದ ಮಾನವೀಯ ಕಾರ್ಯವನ್ನು ಆಂದ್ರಪ್ರದೇಶ ಪೊಲೀಸ್ ಇಲಾಖೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.