ಮಾಲಿ –
ಸಾಮಾನ್ಯವಾಗಿ ತಾಯಂದಿರು ಅವಳಿ ಅಥವಾ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ಸಾಮಾನ್ಯ ಅದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಬ್ಬ ಮಹಿಳೆ ಬರೊಬ್ಬರಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ.ಹೌದು ವಿಚಿತ್ರ ಎಂದರೆ ಮಹಿಳೆಯೊಬ್ಬಳು ಮೂರು ನಾಲ್ಕು ಅಲ್ಲ ಒಟ್ಟಿಗೆ 9 ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ ಈ ಒಂದು ಘಟನೆ ಕಂಡಯ ಬಂದಿದ್ದು ಮಾಲಿ ದೇಶದಲ್ಲಿ
ಮಾಲಿ ದೇಶದ ಹಲಿಮಾ ಸಿಸ್ಸಿ (25) ಮಂಗಳವಾರ ಏಕ ಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಕೆಗೆ ಹೆರಿಗೆ ಮಾಡಿಸಲು ಇಬ್ಬರು ವೈದ್ಯರು ಭಾರಿ ಶ್ರಮಿಸ ಬೇಕಾಯಿತು..!. ಒಂದೇ ಹೆರಿಗೆಯಲ್ಲಿ ಒಂಬತ್ತು ಮಕ್ಕಳು ಜನಿಸಿರುವ ಈ ಒಂದು ಮಹಾನ್ ಸುದ್ದಿ ಯೊಂದು ದೇಶದ ನಾಯಕರಿಗೂ ತಲುಪಿದೆ
ಜನಿಸಿದ 9 ಮಕ್ಕಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಶಿಶುಗಳಾಗಿವೆ.ತಾಯಿ ಹಾಗೂ ಒಂಬತ್ತು ಮಕ್ಕಳು ಕ್ಷೇಮವಾಗಿ, ಆರೋಗ್ಯವಾಗಿವೆ ಎಂದು ಆ ದೇಶದ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿದ್ದಾ ರೆ. ಸ್ಕ್ಯಾನಿಂಗ್ ಸಮಯದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳು ಜನಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರಂತೆ.ಅಂದಾಜಿನ ಪ್ರಕಾರ ಮಹಿಳೆ ಏಳು ಮಕ್ಕಳಿಗೆ ಜನ್ಮ ನೀಡಬಹುದು ಎಂದು ಭಾವಿಸಿದ್ದ ಳು. ಆದರೆ ಒಮ್ಮೆಗೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ರುವುದಕ್ಕೆ ತಮಗೆ ಆಶ್ಚರ್ಯ ಅಘಾತವಾಗಿದೆ ಎಂದು ಹಲೀಮಾ ಹೇಳಿದ್ದಾರೆ ಸಿಸೇರಿಯನ್ ಮೂ ಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ