ಧಾರವಾಡ –
ಕುರಿಗಳಿಗೆ ನೀರನ್ನು ಕುಡಿಸಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಕುರಿಗಾಯಿ ಯೊಬ್ಬ ಸಾವಿಗೀಡಾದ ಘಟನೆ ಧಾರವಾಡದ ತಡಕೋಡ ಗ್ರಾಮದಲ್ಲಿ ನಡೆದಿದೆ.ಡೆಂಗಪ್ಪ ಗಂಗಪ್ಪ ಸುರನ್ನವರ ವಯಸ್ಸು 18 ಕೆರೆಯಲ್ಲಿ ಬಿದ್ದ ದುರ್ದೈವಿಯಾಗಿದ್ದಾನೆ.

ಮೃತ ಕುರಿಗಾಯಿ ಬೈಲಹೊಂಗಲ ದ ವನ್ನೂರ ಗ್ರಾಮದವರಾಗಿದ್ದು ನೀರು ಕೂಡಿಸಲು ಹೋಗಿ ಸಾವನ್ನಪಿದ ದುರ್ದೈವಿಯಾಗಿದ್ದಾನೆ. ಕುರಿಗಳಿಗೆ ನೀರನ್ನು ಕುಡಿಸಲು ಕೆರೆಯಲ್ಲಿ ಹೋಗಿದ್ದರು ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದು ಇನ್ನೂ ವಿಷಯ ತಿಳಿದ ತಡಕೋಡ ಗ್ರಾಮ ಪಂಚಾಯತಿ ಸದಸ್ಯ ಭೀಮಪ್ಪ ಕಸಾಯಿ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ ರಿಗೆ ಮಾಹಿತಿ ನೀಡಿದರು. ನಂತರದ ಸ್ಥಳಕ್ಕೆ ಆಗಮಿಸಿದ ಗರಗ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.