ಹುಬ್ಬಳ್ಳಿ –
ಪಂಜಾಬ್ ರಾಜ್ಯದಲ್ಲಿ ಎಎಪಿ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಎಎಪಿ ಪಕ್ಷದ ಕಾರ್ಯಕರ್ತರಲ್ಲಿ ಹರ್ಷ ಮೊಳಕೆ ಒಡೆದಿದ್ದು ಅದ್ದೂರಿಯಾಗಿ ಸಂಭ್ರಮಾಚರಣೆ ಮೂಲಕ ಅರವಿಂದ ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹೌದು..ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಜಮಾವಣೆ ಗೊಂಡ ಎಎಪಿ ಕಾರ್ಯಕರ್ತರು ಪೊರಕೆ ಹಾಗೂ ಬ್ಯಾನರ್ ಹಿಡಿದುಕೊಂಡು ಪುಷ್ಪ ಮಳೆ ಸುರಿಸುವ ಮೂಲಕ ವಿನೂತನವಾಗಿ ಸಂಭ್ರಮಾಚರಣೆ ಮಾಡಿದರು.
ಪಂಚ ರಾಜ್ಯ ಚುನಾವಣೆಯಲ್ಲಿ ಪಂಜಾಬ್ ರಾಜ್ಯದಲ್ಲಿ ದಾಖಲೆಯ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಅದ್ದೂರಿ ಯಾಗಿ ಸಂಭ್ರಮಾಚರಣೆ ಮಾಡಿದರು.
ಪರಶುರಾಮ ಗೌಡರ ಜೊತೆಗೆ ಮಂಜುನಾಥ ಸರ್ವಿ ಸುದ್ದಿ ಸಂತೆ ಡೆಸ್ಕ್ ಬೆಂಗಳೂರು