ಮಂಡ್ಯ –
ಹೌದು ಐಐಟಿ ಕಾಲೇಜಿನ ಪ್ರಾಚಾರ್ಯರೊಬ್ಬರ ಮೇಲೆ ಶಾಸಕರೊಬ್ಬರು ಕಪಾಳ ಮೋಕ್ಷ ಮಾಡಿದ ಘಟನೆ ಮಂಡ್ಯ ದಲ್ಲಿ ನಡೆದಿದ್ದು ಈ ಒಂದು ಘಟನೆ ಕುರಿತು ಇದನ್ನು ಯಾರು ಕೂಡಾ ಖಂಡಿಸಿ ಹೋರಾಟ ಮಾಡಿಲ್ಲ ಇನ್ನೂ ಸಂಘಟನೆ ಯವರು ಕೂಡಾ ಮೌನವಾಗಿದ್ದು ಜೆಡಿಎಸ್ ಶಾಸಕ ಶ್ರೀನಿವಾಸ್ ಅವರ ವರ್ತನೆಯನ್ನು ಎಬಿವಿಪಿ ಸಂಘಟನೆ ಯವರು ಖಂಡಿಸಿದ್ದಾರೆ ಮಂಡ್ಯದ ಐಟಿಐ ಕಾಲೇಜಿನ ಪ್ರಾಂಶುಪಾಲ ನಾಗನಂದ್ ಅವರಿಗೆ ಕಪಾಳ ಮೋಕ್ಷ ಮಾಡಿರುವುದನ್ನು ಖಂಡಿಸಿ ಎವಿಬಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಾಲ್ವಡಿ ಕೃಷ್ಣ ರಾಜ ಒಡೆಯರ್ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿನೆ ನಡೆಸಿ ಆಕ್ರೋಶ ಹೊರ ಹಾಕಿದರು.ಶಾಸಕರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು ಶಾಸಕರು ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಜೊತೆಗೆ ಶಾಸಕರ ಮೇಲೆ ಸ್ವೀಕರ್ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮನವಿ ಕಳಿಸಿದರು.