ಧಾರವಾಡ –
ಡಿಟೆಕ್ಟಿವ್ಹ್ & ಸೆಕ್ಯೂರಿಟೀಸ್ ಎಜೆನ್ಸಿ, ಬೆಂಗಳೂರು ಕಂಪನಿಯಿಂದ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ನೇಮಕಗೊಂಡು 04 ವರ್ಷಗಳಿಂದ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ
ನಿರ್ವಹಿಸುತ್ತಿದ್ದಾರೆ.

ಎಲ್ಲಾ ಸೆಕ್ಯೂರಿಟಿ ಗಾರ್ಡ್‍ಗಳು ಹಾಗೂ ಆರೋಪಿತ ನಾಗೇಶ ವಾರಂಗ್, ಸೆಕ್ಯೂರಿಟಿ ಗಾರ್ಡ್ ಮತ್ತು ಸೂಪರ ವೈಸರ್ ಗಳು ಪ್ರಯತ್ನಿಸಿದ್ದರಿಂದ ಎಜೆನ್ಸಿಯವರು ರೂ, 9,000-00 ಇದ್ದ ಮಾಸಿಕ ವೇತನ ರೂ, 10,550-00 ಕ್ಕೆ ಹೆಚ್ಚಿಸಿದ್ದು ಅರಿಯರ್ಸ್ ರೂ, 21,000- ಕೊಟ್ಟಿರುತ್ತಾರೆ. ಈಗ ವೇತನ ಹೆಚ್ಚಿಗೆ ಮಾಡಿಸಿ ಅರಿಯರ್ಸ್ ಕೊಡಿಸಿದ್ದಕ್ಕೆ ಕೆಸಿಡಿ ಕಾಲೇಜಿನಲ್ಲಿ ಸಹಾಯಕ ಅಧೀಕ್ಷಕರಾಗಿ ಕೆಲಸ ಮಾಡುತ್ತಿರುವ ಚವ್ಹಾಣ ಅವರಿಗೆ ಹಣ ಕೊಡಬೇಕು ಅಂತ ಹೇಳಿ ಪ್ರತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ನಿಂದ ರೂ, 2,500-00 ರಂತೆ ಸಂಗ್ರಹಿಸುತ್ತಿದ್ದರು.

ಅಲ್ಲದೇ ಭದ್ರತಾ ಸಿಬ್ಬಂದಿಯಾದ ಜಯಪ್ರಕಾಶ್ ಗೂ ಕೊಡುವಂತೆ ರೂ 2,500-00 ಕೊಡುವಂತೆ ನಾಗೇಶ್ ವಾರಂಗ್ ಬೇಡಿಕೆ ಇಟ್ಟಿದ್ದರು. ಕೊಡದಿದ್ದಲ್ಲಿ ಕೆಲಸದಿಂದ ತಗೆದುಹಾಕುವುದಾಗಿ ಹೆದರಿಕೆ ಹಾಕಿದ್ದರು.ಇದರಿಂದ ACB ಗೆ ದೂರು ನೀಡಿದ್ದರು.ದೂರು ಬಂದ ಹಿನ್ನಲೆಯಲ್ಲಿ ACB ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಲ್ ವೇಣುಗೋಪಾಲ, ಡಿಎಸ್‍ಪಿ ಎಸಿಬಿ ಇವರು ACB ಎಸ್ಪಿ ಬಿ ಎಸ್ ನೇಮಗೌಡ ಇವರ ಮಾರ್ಗದರ್ಶನದಲ್ಲಿ ದಾಳಿ ಮಾಡಿದ್ದಾರೆ.

ಮಂಜುನಾಥ ಜಿ ಹಿರೇಮಠ, ಪಿಐ ರವರಿಗೆ ವಹಿಸಿದ್ದು, ಅವರು ಕೆಸಿಡಿ ಕಾಲೇಜು
ಧಾರವಾಡದಲ್ಲಿ ಆರೋಪಿತ ನಾಗೇಶ ವಾರಂಗ್, ಸೆಕ್ಯೂರಿಟಿ ಗಾರ್ಡ್ ಕೆಸಿಡಿ ಕಾಲೇಜು, ಧಾರವಾಡ ರವರು ಪಿರ್ಯಾದಿದಾರರಿಂದ ರೂ, 2,500-00 ಲಂಚದ ಹಣ ಪಡೆಯುವಾಗ ಅವರನ್ನು
ಅಪರಾಧ-ಕಾಲದಲ್ಲಿಯೇ ಲಂಚದ ಹಣದೊಂದಿಗೆ ವಶಪಡಿಸಿಕೊಂಡಿದ್ದು ಸದರಿಯವರನ್ನು ಶೋಧನೆ ಮಾಡಲಾಗಿ

ಇದೇ ರೀತಿ ಸೆಕ್ಯೂರಿಟಿ ಗಾರ್ಡ್ ಗಳಿಂದ ಸಂಗ್ರಹಿಸಿದ್ದ ಹಣ ರೂ, 60,000-00 ದೊರೆತಿದ್ದು ಅದನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿರುತ್ತದೆ. ಟ್ರ್ಯಾಪ್ ತಂಡದ ನೇತೃತ್ವವನ್ನು ಮಂಜುನಾಥ ಜಿ ಹಿರೇಮಠ, ಪಿಐ ರವರು ವಹಿಸಿದ್ದು ಹಾಗೂ ಸಿಬ್ಬಂದಿಗಳಾದ
ಶ್ರೀಮತಿ ಜೆ.ಜಿ.ಕಟ್ಟಿ, ಗಿರೀಶ ಎಸ್ ಮನಸೂರ, ಶ್ರೀಶೈಲ್ ಎಸ್ ಕಾಜಗಾರ, ಶಿವಾನಂದ ಕೆಲವೆಡಿ, ಲೋಕೇಶ ಎ ಬೆಂಡಿಕಾಯಿ, ಕಾರ್ತಿಕ ಹುಯಿಲಗೋಳ, ಆರ್ ಬಿ ಯರಗಟ್ಟಿ,ಗಣೇಶ ಶಿರಹಟ್ಟಿ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.