ಚಿಕ್ಕಬಳ್ಳಾಪುರ –
ಆತ ಹಲವಾರು ವರ್ಷಗಳ ಕಾಲ ದೇಶದ ಗಡಿ ಕಾದು ಬಂದಿದ್ದ ಯೋಧ.ನಿವೃತ್ತಿ ಬಳಿಕ ಬದುಕನ್ನು ಕಟ್ಟಿಕೊಳ್ಳೋಕೆ ಭೂಮಿ ಮಂಜೂರು ಮಾಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದ.ಸರ್ಕಾರವೂ ಕೂಡಾ ಆ ಒಂದು ಜಮೀನಿನನ್ನು ಮಂಜೂರು ಮಾಡಿತ್ತು. ಆದರೆ ಈ ಮಾಜಿ ಸೈನಿಕ ಸಲ್ಲಿಸಿದ್ದ ಅರ್ಜಿ ಪರಿಶೀಲಿ ಸಿ ವರದಿ ನೀಡಲಿಕ್ಕೆ ಕಂದಾಯ ನಿರೀಕ್ಷಕರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ

ಹೌದು ವರದಿ ನೀಡಲು ಎರಡು ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿಡ್ಲಘಟ್ಟ ತಾಲೂಕಿನ ಕಂದಾಯ ನಿರೀಕ್ಷಕ.ಯೋಧನಿಂದ ಒಂದು ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಕಂದಾಯ ನಿರೀಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಬಾಶೆಟ್ಟಿಹಳ್ಳಿ ಹೋಬಳಿ ರಾಜ ಸ್ವ ನಿರೀಕ್ಷಕ ವೇಣುಗೋಪಾಲ ಲಂಚ ಸ್ವೀಕರಿಸಿ ಈಗ ಜೈಲು ಸೇರಿದ್ದಾರೆ.ಈತನಿಂದ ಒಂದು ಲಕ್ಷ ರೂಪಾ ಯಿ ಲಂಚದ ಹಣ ವಶಪಡಿಸಿಕೊಂಡಿದ್ದು ಭ್ರಷ್ಟಾ ಚಾರ ನಿಯಂತ್ರಣ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ

ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಮಾಜಿ ಸೈನಿಕ ನಿಗೆ ದೇಶ ಸೇವೆ ಮಾಡಿ ಬರುವ ಸೈನಿಕರಿಗೆ ನಿವೃತ್ತಿ ನಂತರ ಜೀವನೋಪಾಯಕ್ಕೆ ಅವರು ಬಯ ಸಿದ ಪ್ರದೇಶದಲ್ಲಿ ಕೃಷಿ ಜಮೀನು ಮಂಜೂರು ಮಾ ಡುವ ಕಾನೂನು ಅಸ್ತಿತ್ವದಲ್ಲಿದೆ.

ಅದರಂತೆ ಬೆಂಗಳೂರಿನ ಕಲ್ಯಾಣ ನಗರದಲ್ಲಿ ವಾಸ ವಾಗಿರುವ ಮಾಜಿ ಸೈನಿಕ ಸರ್ಕಾರಿ ಜಮೀನು ಮಂ ಜೂರು ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಗಳಿಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ವರದಿ ನೀಡುವಂತೆ ಬಾಶೆಟ್ಟಿಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಅರ್ಜಿ ವರ್ಗಾಯಿಸಿ ದ್ದರು.ಅರ್ಜಿ ಪರಿಶೀಲಿಸಿ ಜಮೀನು ಮಂಜೂರು ಮಾಡುವ ಬಗ್ಗೆ ವರದಿ ನೀಡಲು ಎರಡು ಲಕ್ಷ ರೂ. ಲಂಚ ನೀಡುವಂತೆ ಮಾಜಿ ಯೋಧನ ಬಳಿಯೇ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದನು
ದೇಶಕಾಯುವ ಯೋಧ ಎಂಬುದನ್ನೂ ನೋಡದೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ಕುರಿತು ಮಾಜಿ ಯೋಧ ಚಿಕ್ಕಬಳ್ಳಾಪುರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.