ಹುಬ್ಬಳ್ಳಿ –
ನೀರಾವರಿ ಇಲಾಖೆಯ ಅಧಿಕಾರಿ ದೇವರಾಜ್ ಶಿಗ್ಗಾವಿ ಮನೆಯ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಪತ್ತೆಯಾದ ಆಸ್ತಿ ಪಾಸ್ತಿಯನ್ನು ನೋಡಿ ಕಂಗಾಲಾಗಿದ್ದಾರೆ.

ಸೂರ್ಯ ಉದಯಿಸುವ ಮುನ್ನವೇ ಮೈ ನಡಗುವ ಚಳಿಯಲ್ಲಿ ಬೆಳ್ಳಂ ಬೆಳಿಗ್ಗೆ ಇಂದು ಬೆಳಿಗ್ಗೆ ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ನೇತ್ರತ್ವದಲ್ಲಿನ ಮೂರು ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಬೆಳಿಗ್ಗೆಯಿಂದ ಶೋಧ ಮಾಡಿದ ಅಧಿಕಾರಿಗಳಿಗೆ ಲೆಕ್ಕವಿಲ್ಲದಷ್ಟು ಹಣ ಬಂಗಾರ ಚರಾಸ್ತಿ ಚಿರಾಸ್ತಿ ಮನೆ ಹೀಗೆ ಎಲ್ಲವೂ ಲೆಕ್ಕವಿಲ್ಲದಷ್ಟು ಸಿಕ್ಕಿದೆ.

ಇದನ್ನೇಲ್ಲವನ್ನು ನೋಡಿದ ಎಸಿಬಿ ಅಧಿಕಾರಿಗಳು ಅಧಿಕಾರಿಯ ಆಸ್ತಿಯನ್ನು ನೋಡಿ ದಿಗ್ಬ್ರಮೆ ಗೊಂಡಿದ್ದಾರೆ. ದೇವರಾಜ್ ಶಿಗ್ಗಾವಿಗೆ ಸೇರಿದ ಆಸ್ತಿಯ ವಿವರವನ್ನು ನೊಡೊದಾದರೆ (ಪತ್ನಿಯ ಕಿರಿಯ ಸಹೋದರ ಕೃಷ್ಣ ಹೆಸರಿನಲ್ಲಿ ರಾಜೀವ್ ಗಾಂಧಿ ನಗರದಲ್ಲಿ 3 ಅಂತಸ್ತಿನ ಮನೆ ದೇವರಾಜ್ ಶಿಗ್ಗಾವಿ ಪತ್ನಿಯ ತಂದೆ ಭೀಮಪ್ಪ ಹೆಸರಿನಲ್ಲಿ ಬಾಲಾಜಿ ನಗರದಲ್ಲಿ 2 ಅಂತಸ್ತಿನ ಆರ್ ಸಿಸಿ ಮನೆ ದೇವರಾಜ ಶಿಗ್ಗಾವಿ ತಾಯಿ ಕುಸುಮಾವತಿ

ಹೆಸರಿನಲ್ಲಿ ಕೋಟಿಲಿಂಗ ನಗರದಲ್ಲಿ 2 ಅಂತಸ್ತಿನ ಮನೆ) ರಾಜೀವ್ ಗಾಂಧಿ ನಗರದಲ್ಲಿ 2 ಅಂತಸ್ತಿನ ಭವ್ಯವಾದ ಮನೆ ಮತ್ತು ಕೋಟಿ ಲಿಂಗನಗರದ ಮನೆ ಅಂದಾಜು ಮೌಲ್ಯ 1.16 ಕೋಟಿ ಕೋಟಿಲಿಂಗ ನಗರದಲ್ಲಿ 2 ಖಾಲಿ ನಿವೇಶನಗಳು ಹಾನಗಲ್ ತಾಲೂಕಿನ ಇನಾಂ ನೀರಲಗಿ ಮತ್ತು ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳದಲ್ಲಿ ಒಟ್ಟು 26 ಎಕರೆ ಕೃಷಿ ಜಮೀನು 8 ಲಕ್ಷ ಮೌಲ್ಯದ ಎರಡು ವಾಹನಗಳು 59.84 ಲಕ್ಷ ನಗದು ಹಣ ಪತ್ತೆಯಾಗಿದೆ

30 ಲಕ್ಷ ಉಳಿತಾಯ ಹಾಗೂ ಠೇವಣಿ ಖಾತೆಗಳಲ್ಲಿ ಹಣ ಪತ್ತೆ 500 ಗ್ರಾಂ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿ 3 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು (ದೇವರಾಜ್ ಶಿಗ್ಗಾವಿ ತಾಯಿ ಹೆಸರಿನಲ್ಲಿರುವ ಕೋಟಿಲಿಂಗ ನಗರದಲ್ಲಿನ ಮನೆ ಪರಿಶೀಲನೆ ಇನ್ನೂ ಮುಂದುವರೆದಿದೆ) ಇದನ್ನೇಲ್ಲವನ್ನು ಲೆಕ್ಕ ಹಾಕುತ್ತಲೇ ಇನ್ನೂ ದಾಳಿಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ.

ಈವರೆಗೆ ದಾಳಿಯ ಸಮಯದಲ್ಲಿ ಈ ಒಂದು ಅಧಿಕಾರಿಯ ಬಳಿ ಬರೊಬ್ಬರಿ ಸುಮಾರು ಅಂದಾಜು 10 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದ್ದು ಇನ್ನೂ ಕಾರ್ಯಾಚರಣೆ ಮುಂದುವರೆದಿದ್ದು ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಇನ್ನೂ ಅಧಿಕಾರಿಯ ಪತ್ನಿಯ ಲಾಕರ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶೋಧ ಕಾರ್ಯವನ್ನು ಎಸಿಬಿ ಅಧಿಕಾರಿಗಳು ಆರಂಭ ಮಾಡಿದ್ದಾರೆ.