ಹುಬ್ಬಳ್ಳಿ –
ಎಸಿಬಿ ದಾಳಿ ವೇಳೆ ಹುಬ್ಬಳ್ಳಿಯ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ.ಹುಬ್ಬಳ್ಳಿಯ ರಾಜೀವ್ ನಗರದಲ್ಲಿರುವ ದೇವರಾಜ್ ಶಿಗ್ಗಾಂವಿ ಮನೆಯ ಲಾಕರ್ ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಲಾಕರ್ ತೆರೆದು ನೋಡಿದ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.ಐದುನೂರು, ಎರಡು ಸಾವಿರ ರೂಪಾಯಿ ನೋಟುಗಳ ಕಂತೆ ಕಳತೆ ಪತ್ತೆಯಾಗಿವೆ
ಲಾಕರ್ ನಲ್ಲಿದ್ದ 56 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ ಎಸಿಬಿ ಅಧಿಕಾರಿಗಳು

300 ಗ್ರಾಂ ಬಂಗಾರ, 200 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು ಬೆಳಿಗ್ಗೆ ಯಿಂದ ನಡೆಯುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.ದಾಳಿ
ಮುಂದುವರೆದಿದ್ದು ನೀರಾವರಿ ಇಲಾಖೆ ಅಧಿಕಾರಿ ಮನೆ ಮೇಲಿ ಇನ್ನೂ ಶೋಧವನ್ನು ಎಸಿಬಿ ಅಧಿಕಾರಿಗಳು ಮಾಡತಾ ಇದ್ದಾರೆ