ಹುಬ್ಬಳ್ಳಿ –
2014-15 ಮತ್ತು 2015-16ನೇ ಸಾಲಿನ ನಗರ ಹಸರೀಕರಣ ಯೋಜನೆಯಡಿಯಲ್ಲಿ ಹುಬ್ಬಳ್ಳಿ ಅರಣ್ಯ ವಲಯದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಮಾಡಿದ್ದು,ಸಂಬಂದಿಸಿದವರ ವಿರುದ್ದ ಕ್ರಮ ಜರುಗಿಸುವಂತೆ ಕೋರಿ ಸಲಿಸಿದ್ದ ಅರ್ಜಿ ಯನ್ನು ವಿಚಾರಣೆ ನಡೆಸಿ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ

ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಆರೋಪಿತ ಸಿ. ಹೆಚ್. ಮಾವಿನತೋಪ, ಆಗಿನ ಆರ್.ಎಫ್.ಓ. ಹುಬ್ಬಳ್ಳಿ ಪ್ರಾದೇಶಿಕ ಅರಣ್ಯ ವಲಯ, ಹಾಲಿ ನಿವೃತ್ತ ರವರ ವಿರುದ್ದ ಎಸಿಬಿ ಪೊ.ಠಾ. ಧಾರವಾಡ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.



ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ. ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ನಡೆಸಿದ ಡಿ.ಎಸ್.ಪಿ ಎಲ್.ವೇಣುಗೋಪಾಲ , ತನಿಖಾ ಸಹಾಯಕ ಶಿವಾನಂದ ಕೆ ಕೆಲವಡಿ ಅವರು ನಗರ ಹಸರೀಕರಣ ಯೋಜನೆಯಡಿಯಲ್ಲಿ ಸುಮಾರು 1 ಕೋಟಿ 20 ಲಕ್ಷ ಹಣದ ದುರುಪಯೋಗವಾದ ಬಗ್ಗೆ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದು ಇಂದು ಸಿ.ಹೆಚ್.ಮಾವಿನತೋಪ, ದತಾತ್ರೇಯ ಪಾಟೀಲ, ವಿನಾಯಕ ಪಾಟೀಲ ಸೇರಿದಂತೆ ಗುತ್ತಿಗೆದಾರರುಗ ಳನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿತರನ್ನು ನ್ಯಾಯಾಂಗ ಬಂಧನದಲ್ಲಿ ಇರುವಂತೆ ಆದೇಶಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿರುತ್ತದೆ.