ಬಾಗಲಕೋಟೆ –
ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೆಶಕರ ಕಚೇರಿಯ ದ್ವಿತೀಯ ದರ್ಜೆರ ಸಹಾಯಕ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ನವನಗರದ ಜಿಲ್ಲಾ ಖಜಾನೆ ಕಚೇರಿಯಲ್ಲಿ ಈ ಒಂದು ಘಟನೆ ನಡೆದಿದೆ.
ರಮೇಶ ಕೊಟ್ನಳ್ಳಿ ಎಂಬುವರೇ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ ರಾಗಿದ್ದಾರೆ.ಬೀಳಗಿ ತಾಲೂಕಿನ ಮುತ್ತಲ ದಿನ್ನಿ ಮೂಲದ ತೆರಗೆ ಇಲಾಖೆಯ ನಿವೃತ್ತ ನೌಕರ ಯಲ್ಲಪ್ಪ ಗುಳಬಾಳ ಅವರಿಂದ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ
ಎರಡು ಸಾವಿರ ಲಂಚ ಪಡೆಯುವಾಗ ಈ ಒಂದು ದಾಳಿ ನಡೆದಿದೆ.ಕಚೇರಿಯ ಜವಾನ ಮಲಕಾಜಪ್ಪ ಕುದರಿ ಕಡೆಗೆ ಲಂಚದ ಹಣ ಪಡೆದು ತಾನು ಇಟ್ಟು ಕೊಳ್ಳುವ ಹೇಳಿದ್ದರು ಈ ಒಂದು ಸಂದರ್ಭದಲ್ಲಿ ದಾಳಿಯನ್ನು ಮಾಡಲಾಗಿದೆ. ಉತ್ತರ ವಲಯ ಪೊಲೀಸ್ ಆಧೀಕ್ಷಕ ಬಿ.ಎಸ್.ನೇಮ ಗೌಡ DSP ಸುರೇಶ ರೆಡ್ಡಿ ನೇತೃತ್ವದಲ್ಲಿನ ತಂಡ ದಾಳಿಯನ್ನು ಮಾಡಿದೆ.