ಬೆಳಗಾವಿ –
ಹೊಸ ಮೊಬೈಲ್ ಅಂಗಡಿ ತೆರೆಯಲು ಜಿ ಎಸ್ ಟಿ ನಂ ಮಂಜೂರು ಮಾಡಲು ಅರ್ಜಿದಾದರಿಂದ 2 ಸಾವಿರ ಲಂಚ ಕೇಳಿದ್ದ ಬೆಳಗಾವಿಯ ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ಪೆಕ್ಟರ್ ಹಣ ಸ್ವೀಕರಿಸುತ್ತಿದ್ದಾಗ ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ.ಮೆಹಬೂಬ್ ಬಾಬುಲಾಲ್ ಸಿಪಾಯಿ ಬಂಧಿತ ಇನ್ಸ್ಪೆಕ್ಟರ್ ಆಗಿದ್ದಾರೆ. 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕಾಕತಿ ಮೂಲದ ನದೀಮ್ ಮುಲ್ಲಾ ಎಂಬುವರು GST ನೋಂದಣಿಗೆ ಅರ್ಜಿ ಸಲ್ಲಿಸಿದ್ದರು.ಹಣ ಕೇಳಿದ್ದ ಬಗ್ಗೆ ಎಸಿಬಿ ದೂರು ಸಲ್ಲಿಸಿದ್ದರು. ಹಣ ಸ್ವೀಕರಿಸುತಿದ್ದಾಗ ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ACB SP ಬಿ. ಎಸ್. ನೇಮಗೌಡ ಮಾರ್ಗದರ್ಶ ನದಲ್ಲಿ DYSP ವೇಣುಗೋಪಾಲ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಎ ಎಸ್. ಗುದಿಗೊಪ್ಪ, ಸುನಿಲ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
.