ಕೋಲಾರ –
ಕೋಲಾರದಲ್ಲಿ ಎಸಿಬಿ ಅಧಿಕಾರಿಗಳು ಎರಡು ಕಡೆಗಳಲ್ಲಿ ಕಾರ್ಯಾಚರಣೆ ಮಾಡಿ ಇಬ್ಬರನ್ನು ಬಲೆಗೆ ಹಾಕಿದ್ದಾರೆ . ಸರ್ಕಾರಿ ಕೆಲಸ ಮಾಡಲು ಅಕ್ರಮವಾಗಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನೌಕರರು ಸೋಮವಾರ ಎಸಿಬಿ ಪೊಲೀಸರ ಬಲೆಗೆ ಬಿದಿದ್ದಾರೆ.
ಮುಳಬಾಗಿಲು ತಾಲ್ಲೂಕು ಕಚೇರಿಯ ಗ್ರಾಮಲೆಕ್ಕಿಗ ಕಿರಣ್ ಹಾಗೂ ಕೋಲಾರ ನಗರಸಭೆಯ ಬಿಲ್ ಕಲೆಕ್ಟರ್ ವೆಂಕಟರಮಣಪ್ಪ ಎಸಿಬಿ ಬಲೆಗೆ ಸಿಕ್ಕಿಬಿದಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಸಂತೋಷ್ ಎಂಬುವರಿಂದ ಒಂದು ಲಕ್ಷ ಲಂಚ ಪಡೆಯುತ್ತಿದ್ದಾಗ ಕೋಲಾರದ ಎಸಿಬಿ ಇನ್ಸ್ಪೆಕ್ಟರ್ ಫಾರೂಕ್ ಪಾಷ ಹಾಗೂ ಇತರ ಅಧಿಕಾರಿಗಳು ದಾಳಿ ನಡೆಸಿದರು.
ಕಂಪ್ಯೂಟರ್‌ನಲ್ಲಿ ಪಹಣಿ ತಿದ್ದುಪಡಿ ಮಾಡಲು ಒಂದು ಲಕ್ಷ ಲಂಚ ನೀಡುವಂತೆ ಆರೋಪಿ ಕಿರಣ್ ಕುಮಾರ್ ಒತ್ತಾಯಿಸುತ್ತಿದ್ದ. ಈ ಬಗ್ಗೆ ಸಂತೋಷ್ ಕೋಲಾರದ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಕೋಲಾರ ನಗರಸಭೆಯ ಬಿಲ್ ಕಲೆಕ್ಟರ್ ವೆಂಕಟರವಣಪ್ಪ ಎಸಿಬಿ ಬಲೆಗೆ ಸಿಕ್ಕಿಬಿದಿದ್ದಾರೆ.
ಕುವೆಂಪು ನಗರದ ಅಸೀಪ್ ಪಾಷ ಎಂಬುವರಿಂದ 18 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ. ಮನೆ ತೆರಿಗೆ ಕಡಿಮೆ ಮಾಡಲು ಲಂಚ ನೀಡುವಂತೆ ಒತ್ತಾಯಿಸ ಲಾಗಿತ್ತು.
ಕೋಲಾರ ಎಸಿಬಿ ಪೊಲೀಸರು ಭ್ರಷ್ಟಚಾರ ನಿರ್ಮೂಲನಾ ಕಾಯ್ದೆ ಮೇರೆಗೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಅಧಿಕಾರಿಗಳು.