ಟ್ಯಾಂಕರ್ ಪಲ್ಟಿ – ಬೆಳ್ಳಂ ಬೆಳಿಗ್ಗೆ ತಪ್ಪಿತು ಧಾರವಾಡದಲ್ಲಿ ಅವಘಡ

Suddi Sante Desk

ಧಾರವಾಡ

ಪೆಟ್ರೋಲ್ ತುಂಬಿದ ಟ್ಯಾಂಕರ್ ವೊಂದು ಪಲ್ಟಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಈ ಒಂದು ಅಪಘಾತ ನಡೆದಿದೆ.

ಧಾರವಾಡದಿಂದ ಬೆಳಗಾವಿ ಕಡೆ ಹೊರಟಿದ್ದ ಟ್ಯಾಂಕರ್ ವೊಂದು ಏಕಾಏಕಿಯಾಗಿ ವಿದ್ಯುತ್ ಕಂಬಕ್ಕೆ ಗುದ್ದಿ ನಡು ರಸ್ತೆಯಲ್ಲಿ ಪಲ್ಟಿಯಾಗಿದೆ

ಪೆಟ್ರೋಲ್ ತುಂಬಿಕೊಂಡು ಹೋರಟಿದ್ದ ಟ್ಯಾಂಕರ್ ಇದಾಗಿದ್ದು ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇತ್ತ ಟ್ಯಾಂಕರ್ ಅಪಘಾತಕ್ಕೆ ನಿಜವಾದ ಕಾರಣ ಏನು ಎಂಬ ಕುರಿತಂತೆ ಧಾರವಾಡ ಸಂಚಾರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.ಏನೇ ಆಗಲಿ ಧಾರವಾಡದ ಕೃಷಿ ವಿವಿ ಬಳಿ ಬೆಳ್ಳಂ ಬೆಳಿಗ್ಗೆ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.