ಹುಬ್ಬಳ್ಳಿ –
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಬುಡನಾಳ ಕ್ರಾಸ್ ಬಳಿ ನಡೆದಿದೆ.ಕಲಘಟಗಿ ಪೊಲೀಸ್ ಠಾಣೆಯ ಪಂಡಿತ ಕಾಸರ್(28) ಮೃತ ಪೊಲೀಸ್ ಕಾನ್ಸ್ ಸ್ಟೇಬಲ್ ರಾಗಿದ್ದು ಇನ್ನೋರ್ವರು ಸಾರ್ವಜನಿಕರಾಗಿದ್ದು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ

ಹುಬ್ಬಳ್ಳಿ ತಾಲೂಕಿನ ಬುಡನಾಳ ಕ್ರಾಸ್ ಬಳಿ ನಿನ್ನೆ ತಡರಾತ್ರಿ ಮಳೆ ಬಿರುಗಾಳಿಯಿಂದ ರಸ್ತೆಯಲ್ಲಿ ಮರಗಳು ಬಿದ್ದಿದ್ದವು.ಇದರಿಂದ ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿ ಉಂಟಾಗಿತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್ ಸ್ಟೇಬಲ್ ಹಾಗೆಯೇ ಇನ್ನೊರ್ವ ಸಾರ್ವ ಜನಿಕರೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ


ಇಬ್ಬರು ಗಾಯಗೊಂಡಿದ್ದು ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಾಗಿದೆ