ಬಳ್ಳಾರಿ –
ಕಳೆದ ಒಂದು ವರ್ಷದಿಂದ ಶಾಲೆಯ ಬ್ಯಾಂಕ್ ಖಾತೆಯ ಲ್ಲಿದ್ದ ಇಡುಗಂಟು( ಫಿಕ್ಸೆಡ್ ಡಿಪಾಜಿಟ್ ) ಸೆಲ್ಫ್ ಚೆಕ್ ಮೂಲಕ ಖಾತೆಯಲ್ಲಿದ್ದ ಹಣವನ್ನು ಮುಖ್ಯ ಶಿಕ್ಷಕ ರೊಬ್ಬರು ವಯಕ್ತಿಕ ಕೆಲಸಕ್ಕೆ ಬಳಕೆ ಮಾಡಿಕೊಂಡ ಘಟನೆ ಬಳ್ಳಾರಿ ಯಲ್ಲಿ ನಡೆದಿದೆ.ಹೌದು ಮಹಮ್ಮದ್ ಪಿರಾನಾ ಎಂಬ ಶಿಕ್ಷಕರ ಮೇಲೆ ಈ ಒಂದು ಆರೋಪ ಕೇಳಿ ಬಂದಿದೆ ಶಾಲೆಯಲ್ಲಿನ ಹಣವನ್ನು ಆಗಾಗ್ಗೆ ಡ್ರಾ ಮಾಡಿಕೊಳ್ಳುತ್ತಲೇ ಬಂದಿದ್ದರು.ಕಳೆದ ಎರಡು ದಿನಗಳ ಹಿಂದೆ ಶಾಲೆಯ ಶಿಕ್ಷಕ ರೊಬ್ಬರಿಗೆ ಬ್ಯಾಂಕ್ ಸಿಬ್ಬಂದಿ ಈ ಒಂದು ಕುರಿತು ಮಾಹಿತಿ ನೀಡಿದ್ದಾರೆ.ಮುನ್ಸಿಫಲ್ ಹೈಸ್ಕೂಲ್ ಶಾಲೆ ಹೆಸರಿನ ಖಾತೆ ಯಲ್ಲಿದ್ದ 36.64 ಲಕ್ಷ ರೂಪಾಯಿಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕರೇ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಈಗ ಗಂಭೀರವಾಗಿ ಕೇಳಿ ಬಂದಿದೆ.ನಗರದ ಮುನ್ಸಿಪಲ್ ಹೈಸ್ಕೂಲ್ ಮುಖ್ಯ ಶಿಕ್ಷಕ ಮಹಮ್ಮದ್ ಪಿರಾನಾ ಎಂಬು ವರು ಹಣ ದುರುಪಯೋಗ ಮಾಡಿಕೊಂಡ ಮುಖ್ಯ ಶಿಕ್ಷಕ ರಾಗಿದ್ದಾರೆ
ನಿವೃತ್ತ ಪ್ರಾಚಾರ್ಯರೊಬ್ಬರು ಹಣ ದುರ್ಬಳಕೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ವಿಚಾ ರಣೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಣ ದುರ್ಬಳಕೆ ಆಗಿರುವುದನ್ನ ಪತ್ತೆ ಮಾಡಿದ್ದಾರೆ.ಮುನ್ಸಿಫಲ್ ಹೈಸ್ಕೂಲ್ ಗೆ 2020 ಮೇ 13 ರಿಂದ ಶಾಲೆ ಪ್ರಾಂಶುಪಾಲರಾಗಿ ನೇಮಕವಾದ ಮಹಮ್ಮದ್ ಪಿರಾನಾ ಶಾಲೆಯ ಖಾತೆಯ ಲ್ಲಿದ್ದ 36.64 ಲಕ್ಷ ರೂಪಾಯಿಗಳನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ.ಶಾಲೆಯ ಖಾತೆಯಲ್ಲಿ ಸದ್ಯ 64 ರೂಪಾಯಿ ಮಾತ್ರ ಉಳಿದಿದ್ದು..