ಹುಬ್ಬಳ್ಳಿ –

ಹೆಂಡತಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ್ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕಿಲ್ಲಾ ಓಣಿಯಲ್ಲಿ ಈ ಒಂದು ಘಟನೆ ನಡೆದಿದೆ.ಮೆಹರುನ್ನಿಸಾ ಸೈಫ್ ಅಲಿ ಈಟಿ ಕೊಲೆಯಾದ ಮಹಿಳೆಯಾಗಿದ್ದಾಳೆ. ಮೆಹರುನ್ನಿಸಾ ಪತಿ ಸೈಫ್ ಅಲಿ ಯೇ ಈ ಒಂದು ಕೊಲೆಯನ್ನು ಮಾಡಿದ ಆರೋಪಿಯಾಗಿದ್ದಾನೆ. ಮೂಲತಃ ಗದಗ ನವರಾದ ಇವರು ಕುಸುಗಲ್ಲ್ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು.

ಕುಟುಂಬದವರು ಸಂಬಂಧಿಕರೊಂದಿಗೆ ಇದ್ದ ಇವರು ಇಂದು ಈ ಒಂದು ಕೊಲೆಯನ್ನು ಸೈಫ್ ಅಲಿ ಮಾಡಿದ್ದಾನೆ.ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇನ್ಸ್ಪೆಕ್ಟರ್ ಮಠಪತಿ ಪಿಎಸ್ಐ ಪ್ರಸಾದ್ ಪಣೇಕರ,ಸಿಬ್ಬಂದಿ ಗಳಾದ ನಾರಾಯಣ ಹಿರೇಹೊಳಿ,ಮಂಜು ಹೇಳವರ, ಗೌಡ,ಕರ್ಜಗಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದರು.ಸಧ್ಯ ಆರೋಪಿ ಸೈಫ್ ಅಲಿ ಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ.