ಧಾರವಾಡ –
2015 ರಲ್ಲಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಕುರಿತು ಆರೋಪಿತನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಈರಪ್ಪ ಮಡಿವಾಳಪ್ಪ ದೇಶಣ್ಣವರ ಮತ್ತು ಶೇಖರಪ್ಪ ಮಡಿವಾಳಪ್ಪ ದೇಶಣ್ಣವರ ನಡುವೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಮನಸ್ತಾಪವಾಗಿ ಆರೋಪಿ ಈರಪ್ಪನ ಕೊಲೆ ಮಾಡುವ ಉದ್ದೇಶದಿಂದ
31-1 2015 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನರೇಂದ್ರ ಗ್ರಾಮದಲ್ಲಿ ತಾಯಿ ಮನೆಯ ಕಡೆಗೆ ಹೊರಟಿದ್ದ ಶೇಖಪ್ಪ ಮಡಿವಾಳಪ್ಪ ದೇಶಣ್ಣವರ ಮತ್ತು ಹಾಗೂ ಈರಣ್ಣ ಕೂಡಿಕೊಂಡು ಬೈದಾಡುತ್ತಾ ಅಡಗಟ್ಟಿ ನಿಲ್ಲಿಸಿ
ಶೇಖಪ್ಪನು ತನ್ನ ಕೈಯಲ್ಲಿದ್ದ ಕೋಯಿತಾದಿಂದ ಈರಪ್ಪನ ತಲೆಗೆ ಹೊಡೆದ್ದಲ್ಲದೇ ಅರೊಪಿತನಾದ ಈರಣ್ಣ @ ಈರನು ಸೈಕಲ್ ಚೈನದಿಂದ ಈರಪ್ಪನ ಕುತ್ತಿಗೆಗೆ ಹಾಕಿದ್ದಲ್ಲದೆ, ಕಲ್ಲನ್ನು ಎತ್ತಿ ಅವನ ತಲೆಯ ಮೇಲೆ ಹಾಕಿ ಗಾಯಪಡಿಸಿ ಕೊಲೆ ಮಾಡಿದ ಅಪರಾಧ ವಿಚಾರಣೆ ವೇಳೆ ಸಾಬಿತಾಗಿದೆ.
ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪಂಚಾಕ್ಷರಿ ಎಂ. ಇವರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ
ಜ.20 ರಂದು ತೀರ್ಪು ನೀಡಿರುತ್ತಾರೆ. ಪ್ರಕರಣದ ಕುರಿತು ಧಾರವಾಡ ಗ್ರಾಮೀಣ ಸಿ.ಪಿ ಐ
ಮೋತಿಲಾಲ್ ಪವಾರ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶ್ರೀಮತಿ ಸರೋಜಾ ಹೊಸಮನಿ ವಾದ ಮಂಡಿಸಿದರು.