ಹುಬ್ಬಳ್ಳಿ –
ಸರ್ಕಾರಿ ನೌಕರರ ಬೇಡಿಕೆಗಳ ಕುರಿತಂತೆ ಕ್ರಮವಹಿಸಲಾಗಿದೆ CM ಹೇಳಿಕೆ – ಮತ್ತೆ ಅದೇ ಮಾತುಗಳು ಸರ್ಕಾರಿ ನೌಕರರ ಹೋರಾಟದ ಕುರಿತಂತೆ ಮುಖ್ಯಮಂತ್ರಿ ಹೇಳಿದ್ದೇನು ನೋಡಿ
7ನೇ ವೇತನ ಆಯೋಗ ಜಾರಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ನಾಳೆ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ ನಡೆಯ ಲಿದೆ.ಈಗಾಗಲೇ ಈ ಒಂದು ಹೋರಾಟಕ್ಕೆ ರಾಜ್ಯಾಧ್ಯಂತ ನೌಕರರ ಸಿದ್ದರಾಗಿದ್ದು ಇನ್ನೂ ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳವಾಗಿ ಮಾತನಾಡಿದ್ದಾರೆ.
ಹೌದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರ ಮುಷ್ಕರದ ವಿಚಾರ ಕುರಿತಂತೆ ಸರ್ಕಾರದಿಂದ ಕ್ರಮವಹಿಸಲಾಗಿದೆ ಎಂದರು.
ಏಳನೇ ವೇತನ ಆಯೋಗ ಜಾರಿ ಬಗ್ಗೆ ಕ್ರಮ ವಹಿಸಲಾಗಿದೆ.ಸರ್ಕಾರಿ ನೌಕರರ ಯುನಿಯನ್ ನಮ್ಮ ಅಧಿಕಾರಿಗಳು ಮಾತನಾಡುತ್ತಿದ್ದಾರೆ .ವೇತನ ಹೆಚ್ಚಳಕ್ಕೆ ಈಗಾಗಲೇ ಬಜೆಟ್ ಅನು ದಾನ ಮೀಸಲಿಟ್ಟದ್ದೇವೆ.
ಸರ್ಕಾರಿ ನೌಕರರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇನೆ ಮಧ್ಯಂತರ ವರದಿ ಪಡೆದು ವೇತನ ಜಾರಿಗೆ ಕ್ರಮವಹಿಸಲಾಗಿದೆ ಎಂದರು. ಇದರೊಂದಿಗೆ ನಾಳೆಯ ಸರ್ಕಾರಿ ನೌಕರರ ಹೋರಾಟವನ್ನು ಮುಖ್ಯಮಂತ್ರಿ ಯವರು ಗಂಭೀರವಾಗಿ ಪರಿಗಣಿಸಿದಿರೊದು ಈ ಮೂಲಕ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..