This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಕ್ರಿಯಾಶೀಲ ಅತ್ಯುತ್ತಮ ಶಿಕ್ಷಕ ಸುರೇಶ ಸೊನ್ನದ ಇನ್ನಿಲ್ಲ ತಂದೆಯ ಹೆಸರಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ನಿರ್ಮಾಣ ಮಾಡಿ ನೆನಪನ್ನು ಉಳಿಸಿ ಮರೆಯಾದ ಮಹಾನ್ ವ್ಯಕ್ತಿ…..

WhatsApp Group Join Now
Telegram Group Join Now

ಬಾಗಲಕೋಟೆ –

ಸುರೇಶ ನಿಂಗಪ್ಪ ಸೊನ್ನದ ಎಂದು ಹೆಸರು ಹೇಳಿದ ರೆ ಕೇಳಿದರೆ ಸಾಕು ಇಡಿ ಬಾಗಲಕೋಟೆ ಜಿಲ್ಲೆ ಹೇಳೊದು ಇವರೊಬ್ಬರು ಮಹಾನ್ ಶಿಕ್ಷಣ ಪ್ರೇಮಿ ತುಂಬಾ ಕಷ್ಟದಲ್ಲಿ ಬೆಳೆದು ಶಿಕ್ಷಕರಾಗಿ ಆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಲದಂತೆ ತಂದೆಯವರ ಹೆಸರಿನಲ್ಲಿ ಸ್ವಂತ ಊರಿನಲ್ಲಿ ಒಂದು ಉತ್ತಮ ಗುಣ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ,ಬಹಳ ಅಪರೂ ಪದ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರು.ಅಲ್ಲದೇ ಬಡ ಮಕ್ಕಳಿಗೆ,ದೀನ ದಲಿತರಿಗೆ,ಹಿಂದುಳಿದ ವರ್ಗ ದ ಮಕ್ಕಳಿಗೆ ಅಪಾರವಾಗಿ ಸಹಾಯಹಸ್ತ ಮಾಡು ವಂತಹ ಮಹಾನ್ ವ್ಯಕ್ತಿ ಅವರು ಹೀಗೆ ಎಲ್ಲರೂ ಹೇಳುವ ಮಾತು ಈ ಒರ್ವ ಮಹಾನ್ ಸಾಧಕ ಮಹಾನ್ ಶಿಕ್ಷಕ ಸಾಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸುರೇಶ್ ಅವರು ಇಂದು ಇನ್ನಿಲ್ಲ ಎಂಬ ಸುದ್ದಿ ಕೇಳಿ ನಂಬಲಾಗುತ್ತಿಲ್ಲ.

ಹೌದು ಇದು ಅತ್ಯಂತ ದುಃಖಕರ ಸಂಗತಿಯಾಗಿದೆ. ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಒಬ್ಬ ಕ್ರಿಯಾಶೀಲ ,ಅತ್ಯುತ್ತಮ ಶಿಕ್ಷಕನನ್ನು‌ ಕಳೆದುಕೊಂ ಡು ಇಂದು ಬಡವಾಗಿದೆ.ತಮ್ಮ ‌ತಂದೆಯವರ ಹೆಸರಿನಲ್ಲಿ ಸ್ವಂತ ಊರಿನಲ್ಲಿ ಒಂದು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ,ಬಹಳ ಅಪರೂಪದ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ ಬಡ ಮಕ್ಕಳಿಗೆ,ದೀನ ದಲಿತರಿಗೆ,ಹಿಂದುಳಿದ ವರ್ಗದ ಮಕ್ಕಳಿಗೆ ಅಪಾರವಾಗಿ ಸಹಾಯಹಸ್ತ ಮಾಡುವಂ ತಹ ಶಿಕ್ಷಣ ಸಂಸ್ಥೆ ಎಂಬ ಹೆಸರಿಗೆ ಪಾತ್ರವಾಗಿದೆ. ಅದೆಷ್ಟೋ ಬಡ ಪ್ರತಿಭಾವಂತ ಮಕ್ಕಳಿಗೆ ಫೀ ನೀಡ ದೇ,ಶಿಕ್ಷಣ ಧಾರೆ ಎರೆದು ನವೋದಯ, ಸೈನಿಕ ಶಾಲೆಗಳಲ್ಲಿ ಆಯ್ಕೆ ಮಾಡಿಸಿದ ಅಪರೂಪದ ಸಂಸ್ಥೆ ಇದಾಗಿದೆ.

ಸಾಲದಂತೆ ಶಿಕ್ಷಣ ಇಲಾಖೆಯ ಅದೆಷ್ಟೋ ಕಾರ್ಯ ಕ್ರಮಗಳಿಗೆ ಲಕ್ಷಾಂತರ ದಾನವನ್ನು ನೀಡುವುದರ ಮೂಲಕ ತಮ್ಮ ಸೇವೆಯನ್ನು ಮಾಡಿದ ಸಾಕಷ್ಟು ಉದಾಹರಣೆಗಳು ನಮ್ಮ ‌ಕಣ್ಣ ಮುಂದಿವೆ.ಇಂದಿ ಗೂ ನನಗೆ ನೆನಪಿದೆ, ಬಿ ಎಚ್ ಗೋನಾಳ ರವರು ಬಾಗಲಕೋಟೆ ಜಿಲ್ಲೆಯ ಉಪನಿರ್ದೇಶಕರು ಆಗಿದ್ದ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಗೆ ಒಂದು ಶಾಶ್ವ ತ ನಿಧಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ,ಒಂದು ಲಕ್ಷ ರೂಪಾಯಿಗಳನ್ನು ದಾನ‌ ಮಾಡಿದ್ದರು ಅಲ್ಲದೆ ರಾಜ್ಯ ಮಟ್ಟದ ಕ್ರೀಡಾಕೂಟ ಮಾಡಿದಾಗಲೂ ಸಹ ಸಾಕಷ್ಟು ದಾನವನ್ನು ಮಾಡುವುದರ ಮೂಲಕ ಬೆನ್ನೆ ಲುಬಾಗಿ ನಿಂತವರು ಶ್ರೀಯುತರು.ಇಂತಹ ಒಬ್ಬ ಅತ್ಯುತ್ತಮ ಶಿಕ್ಷಕನನ್ನು ದಾನಚಿಂತಾಮಣಿಯನ್ನು ಇಲಾಖೆ ಕಳೆದುಕೊಂಡಿದ್ದು ಬಹುದೊಡ್ಡ ನಷ್ಟ. ಬಹುಶಃ ಒಳ್ಳೆಯವರನ್ನು ದೇವರು ಬಹುಬೇಗ ಕರೆದುಕೊಳ್ಳುತ್ತಾನೆ ಎನ್ನುತ್ತಾನೆ,ಆ ಕೆಲಸವನ್ನು ಈಗಲೂ ಮಾಡಿದ ಆ ದೇವರ ನಡೆಗೆ ನಮ್ಮದೊಂ ದು ಧಿಕ್ಕಾರ ಇದೆ.ಬಹುಶಃ ಬಂಟನೂರ ಇಂದು ಒಬ್ಬ ಮೇಧಾವಿ ಬಂಟನನ್ನು ಕಳೆದುಕೊಂಡಿದೆ.ಆ ಕುಟುಂ ಬವರ್ಗ,ಅಪಾರ ಶಿಷ್ಯ ಬಳಗ ಅವರ ಅಗಲಿಕೆಯ ನ್ನು ಹೇಗೆ ತಡೆದುಕೊಳ್ಳುತ್ತದೆ ತಿಳಿಯುತ್ತಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಕಂಬನಿ ಮೀಡಿದಿದ್ದಾರೆ.ಅಲ್ಲದೇ ವೈಯಕ್ತಿಕವಾಗಿ ನನ್ನೊಂದಿಗೆ ಹಲವಾರು ಸಂದರ್ಭದಲ್ಲಿ ಶೈಕ್ಷಣಿಕ ವಾಗಿ ಅವರು ಚರ್ಚೆ ಮಾಡುತ್ತಿದ್ದರು.ಅವರು ಮಾಡಿದ ಸಹಾಯ ಅತ್ಯಂತ ದೊಡ್ಡದು.ನಾನು ಸುಮಾರು ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶ ಕೊಡಿಸಿ ದ್ದೆನೆ.ನನ್ನೂರು ಸುತಗುಂಡಾರ,ಡೊಮನಾಳದ ಜೊತೆ ಜೊತೆಗೆ ಉಳಿದ ಊರಿನ ಹಲವಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಕೊಡಿಸಿದ್ದು ಇದೆ ,ಈ ಋಣವನ್ನು ನಾನು ಹೇಗೆ ತೀರಿಸುವ ಭಾಗ್ಯ ಒದಗಿಬರಲಿ.ಹೋಗಿಬನ್ನಿ ಗುರುಗಳೇ,ನಿಮ್ಮನ್ನು ಉಳಿಸಿಕೊಳ್ಳಲು ಆಗಲಾರದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ ಎಂದಿದ್ದಾರೆ.ಇನ್ನೂ ಮೃತರಾದ ಈ ಒಂದು ಮಹಾನ್ ಶಿಕ್ಷಕನಿಗೆ ಪ್ರೇಮಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರರ ಸಂಘದ ರಾಜ್ಯಾ ಧ್ಯಕ್ಷ ಶಂಭುಲಿಂಗಗೌಡ್ರು ಪಾಟೀಲ,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಬಿ ಹೆಚ್ ಗೋನಾಳ ಜಂಟಿ ನಿರ್ದೇಶಕರು ಧಾರವಾಡ, ಬಸವರಾಜ ಬಾಗೇನ್ನವರ, ಎಸ್ ಬಿ ಮಾಚಾ, ಪರಶುರಾಮ ಪಮ್ಮಾರ, ಜಿ ಎನ್ ದಾಸರಡ್ಡಿ, ಸೇರಿದಂತೆ ಹಲವರು ಅಗಲಿದ ಮಹಾನ್ ಶಿಕ್ಷಕ ಶಿಕ್ಷಣ ಪ್ರೇಮಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk