This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

ಧಾರವಾಡ

ಮುಂಗಾರು ಮಳೆ ಪ್ರವಾಹ ಎದುರಿಸಲು ಸನ್ನದ್ಧರಾಗಿ  ಜಿಲ್ಲಾಧಿಕಾರಿ ದಿವ್ಯ ಪ್ರಭು – ಬರಪರಿಸ್ಥಿತಿ  ಮುಂಗಾರು ಮಳೆ ಪ್ರವಾಹ ಪೂರ್ವ ಸಿದ್ಧತೆ ಕುರಿತು DC ಕಚೇರಿ ಯಲ್ಲಿ ನಡೆಯಿತು ಸಭೆ…..

ಮುಂಗಾರು ಮಳೆ ಪ್ರವಾಹ ಎದುರಿಸಲು ಸನ್ನದ್ಧರಾಗಿ  ಜಿಲ್ಲಾಧಿಕಾರಿ ದಿವ್ಯ ಪ್ರಭು – ಬರಪರಿಸ್ಥಿತಿ  ಮುಂಗಾರು ಮಳೆ ಪ್ರವಾಹ ಪೂರ್ವ ಸಿದ್ಧತೆ ಕುರಿತು DC ಕಚೇರಿ ಯಲ್ಲಿ ನಡೆಯಿತು ಸಭೆ…..
WhatsApp Group Join Now
Telegram Group Join Now

ಧಾರವಾಡ

ಮುಂಗಾರು ಮಳೆ ಪ್ರವಾಹ ಎದುರಿಸಲು ಸನ್ನದ್ಧರಾಗಿ  ಜಿಲ್ಲಾಧಿಕಾರಿ ದಿವ್ಯ ಪ್ರಭು – ಬರಪರಿಸ್ಥಿತಿ  ಮುಂಗಾರು ಮಳೆ ಪ್ರವಾಹ ಪೂರ್ವ ಸಿದ್ಧತೆ ಕುರಿತು DC ಕಚೇರಿ ಯಲ್ಲಿ ನಡೆಯಿತು ಸಭೆ

ರಾಜ್ಯಾದ್ಯಂತ ಮುಂಬರುವ ದಿನಗಳಲ್ಲಿ ಮುಂಗಾರು ಪೂರ್ವ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಅಧಿಕಾರಿಗಳು ಸನ್ನದರಾಗಬೇಕೆಂದು ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜರುಗಿದ ಬರಪರಿಸ್ಥಿತಿ ಹಾಗೂ ಮುಂಗಾರು ಮಳೆ ಪ್ರವಾಹ ಪೂರ್ವ ಸಿದ್ಧತೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್, ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆ ಆಗುವ ಸಂಭವ ಇದ್ದು ಮಳೆ, ಗುಡುಗು, ಮಿಂಚು ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಜೀವ ಹಾನಿಯಾಗದಂತೆ ತಡೆ ಯಲು ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ತಹಶೀಲ್ದಾರರು, ತಾ.ಪಂ. ಇಓಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಧ್ವನಿವರ್ಧಕ ಬಳಸಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಸಂಬಂಧಿತ ಎಲ್ಲ ಸಂಘ, ಸಂಸ್ಥೆಗಳಲ್ಲಿ ಮಳೆ, ಗುಡುಗು, ಮಿಂಚಿನಿಂದ ತಪ್ಪಿಸಿ ಕೊಳ್ಳಲು ಮುಂಜಾಗೃತ ಕ್ರಮಗಳನ್ನು ಪ್ರಚಾರಗೊಳ್ಳಿಸ ಬೇಕು. ಮಳೆ ಬಂದಾಗ ರೈತರು ಹೊಲ, ಗದ್ದೆಗಳ ಬಯಲಲ್ಲಿ ಇರದೆ ಸುರಕ್ಷತಾ ಸ್ಥಳದಲ್ಲಿರಬೇಕು ಎಂದು ತಿಳಿಸಿದರು.

ಗ್ರಾಮಗಳಲ್ಲಿ ಕೆರೆಗಳು ಭರ್ತಿಯಾಗುವ ಹಾಗೂ ದುರ್ಬಲ ಬದುಗಳನ್ನು ಮುಂಜಾಗೃತವಾಗಿ ಪರಿಶೀ ಲಿಸಬೇಕು. ಅಗತ್ಯವಿದ್ದಲ್ಲಿ ಈಗಲೇ ದುರಸ್ಥಿ ಕಾರ್ಯ ಕೈಗೊಳ್ಳಲಬೇಕೆಂದರು. 2019 ಹಾಗೂ 2021ರಲ್ಲಿ ಜಿಲ್ಲೇಯ 78 ಗ್ರಾಮಗಳನ್ನು ಪ್ರವಾಹ ಪೀಡಿತ ಎಂದು ಗುರುತಿಸಲಾಗಿದ್ದು, ತಹಶೀಲ್ದಾರರು ಹಾಗೂ ತಾ.ಪಂ ಇಓಗಳು ತಮ್ಮ ವ್ಯಾಪ್ತಿಯ ಪ್ರವಾಹ ಸಂಭವನಿಯ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸತಕ್ಕದ್ದು,

ಮುಂಜಾಗೃತ ಕ್ರಮಗಳು ಹಾಗೂ ಪರ್ಯಾಯ ವ್ಯವಸ್ಥೆಗಳ ಬಗ್ಗೆ ವರದಿ ಸಿದ್ಧಪಡಿಸತಕ್ಕದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರಾಜ ಕಾಲುವೆ ಹಾಗೂ ಚರಂಡಿಗಳನ್ನು ತಕ್ಷಣವೇ ಸ್ವಚ್ಛಗೊಳಿಸತಕ್ಕದು.

ಹಾಗೂ ನೀರು ಸರಾಗವಾಗಿ ಹೊಗುವಂತೆ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳಾಗಡ್ಡಿ ಅವರಿಗೆ ತಿಳಿಸಿದರು. ರಸ್ತೆ ಬದಿ ಯಲ್ಲಿ ಅಪಾಯಕಾರಿ ಗಿಡ ಮರಗಳನ್ನು ಹಾಗೂ ಟೊಂಗೆಗಳನ್ನು ಈಗಲೇ ತೆರವುಗೊಳ್ಳಿಸತಕ್ಕದು. ಮ್ಯಾನಹೋಲ್‍ಗಳನ್ನು ತಕ್ಷಣವೆ ಮುಚ್ಚತಕ್ಕದು ಎಂದು ತಿಳಿಸಿದರು.

ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ಈಗಲೇ ಗಮನ ವಹಿಸಿ, ಸ್ಥಳಾಂತರ ಗೊಳ್ಳಿಸಬೇಕು. ವಿದ್ಯುತ್ ಸಂಪರ್ಕದಿಂದ ಯಾವುದೇ ಅನಾಹುತಗಳು ಆಗದಂತೆ ವಿವಿಧ ಸ್ಥಳನ್ನು ಗುರುತಿಸಿ, ಈಗಲೇ ಕ್ರಮಕೈಗೊಳ್ಳತಕ್ಕದು ಎಂದು ತಿಳಿಸಿದರು. ಎಲ್ಲ ತಾಲೂಕಾ ಟಾಸ್ಕಪೋರ್ಸ್‍ಗಳು ಈಗಲೇ ಮುಂಜಾಗೃತೆ ಯಾಗಿ ಸಿದ್ಧಗೊಳ್ಳಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ 78 ಖಾಸಗಿ ಕೊಳವೆ ಭಾವಿಗಳಿಂದ 51 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ. ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಮೇ 14 ರಿಂದ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ ಎಂ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯ ಅಜೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ ‌…..


Google News

 

 

WhatsApp Group Join Now
Telegram Group Join Now
Suddi Sante Desk