ಮಾಜಿ ಸಚಿವ ವಿನಯ ಕುಲಕರ್ಣಿ ಮನೆಗೆ ನಟ ದರ್ಶನ್ – ಕುಟುಂಬ ದವರಿಗೆ ಧೈರ್ಯ ತುಂಬಿದ ನಟ

Suddi Sante Desk

ಧಾರವಾಡ –

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿಯವರ ಧಾರವಾಡದಲ್ಲಿನ ನಿವಾಸಕ್ಕೆ ಕನ್ನಡ ಚಿತ್ರ ನಟ ದರ್ಶನ್ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದರು.ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಧ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ ವಿನಯ ಕುಲಕರ್ಣಿ.

ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳು ಹಾಗೂ ವಿನಯ್ ಕುಲಕರ್ಣಿ ಅವರ ಅಕ್ಕ ಅವರೊಂದಿಗೆ ಕೆಲ ಕಾಲ ಸಮಯ ಕಳೆದ ನಟ ದರ್ಶನ್ ದೈರ್ಯ ಹೇಳಿದರು.ಅಭಿಮಾನಿಗಳ ಜನದಟ್ಟಣೆಯ ಹಿನ್ನಲೆಯಲ್ಲಿ ಮಧ್ಯರಾತ್ರಿ ಆಗಮಿಸಿ ಕುಟುಂಬದವರೊಂದಿಗೆ ಮಾತನಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.