ಹುಬ್ಬಳ್ಳಿ
ರೈಲ್ವೆ ಹಳಿಗೆ ತೆಲೆಕೊಟ್ಟು ಪ್ರತಿಭಾವಂತ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರು ತಾಲೂಕು ಯಲುವಿಗಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಮೃತ ಯುವಕನನ್ನು ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡಿರ್ ನಾಗನೂರು ಗ್ರಾಮದಅಡಿವೆಪ್ಪ ಹಾದಿಮನಿ (22) ಎಂದು ಗುರುತಿಸಲಾಗಿದೆ.

ಅಡಿವೆಪ್ಪ ಮನೆಯಲ್ಲಿ ಮೂವರು ಮಕ್ಕಳಲ್ಲಿ ಈತನೇ ಹಿರಿಯ ಮಗನಾಗಿದ್ದು, ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದ. ಮನೆಯ ಕಷ್ಟದ ನಿವಾರಣೆಗಾಗಿ ಕಿಡ್ನಿ ದಾನ ಮಾಡಲು ಮುಂದಾಗಿದ್ದ. ಯಾವುದೇ ಸಮಸ್ಯೆ ಬಗೆಹರಿಯದಿದ್ದಾಗ ಮಾನಸಿಕವಾಗಿ ನೊಂದು ಡೆತ್ ನೋಟು ಬರೆದಿಟ್ಟು ರೈಲಿಗೆ ತಲೆಕೊಟ್ಟಿದ್ದಾನೆ.

ಪಿಯುಸಿಯಲ್ಲಿ ಶೇ. 96 ಅಂಕ ಪಡೆದಿದ್ದ. ಅದಲ್ಲದೆ ಬಿ ಎಸ್ ಸಿ ಯ ಬಾಹ್ಯ ವ್ಯಾಸಂಗ ಮಾಡುತ್ತಿದ್ದ. ಮನೆಯ ನಿರ್ವಹಣೆಗೆ ದಾವಣಗೆರೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಈತ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ತಲೆ ಭಾಗ ದೇಹದಿಂದ ಬೇರ್ಪಟ್ಟಿದ್ದು ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.