ಬೆಂಗಳೂರು –
ಪ್ರೌಢಶಾಲಾ ಶಿಕ್ಷಕರ ವಿಭಾಗದ ಹೊರಗಿನ ಕೋರಿಕೆಯ ವರ್ಗಾವಣೆ ಗೂ ನ್ಯಾಯಾಲಯ ತಡೆಯಾಜ್ಞೆ ಯನ್ನು ನೀಡಿದೆ.ಹೌದು ವರ್ಗಾವಣೆ ವಿಚಾರದಲ್ಲಿ ಆಗಿರುವ ಅನ್ಯಾಯ ಕುರಿತು ಚಾಮರಾಜನಗರ ದ ಶಿಕ್ಷಕಿ ಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಒಂದು ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ವರ್ಗಾವಣೆ ಪ್ರಕ್ರಿಯೆ ಗೆ ತಡೆಯಾಜ್ಞೆ ಯನ್ನು ನೀಡಿದ್ದು ಇನ್ನೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವರ್ಗಾವಣೆ ವಿಭಾಗದ ನಿರ್ದೇಶ ಕರು ಈ ಒಂದು ಕೌನ್ಸಲಿಂಗ್ ನ್ನು ಮುಂದೂಡಿಕೆ ಮಾಡಿ ಆದೇಶವನ್ನು ಹೊರಡಿಸಿದ್ದಾರೆ
ಇನ್ನೂ ಈ ಒಂದು KAT ತಡೆಯಾಜ್ಞೆಯಿಂದಾಗಿ ಪ್ರೌಢ ಶಾಲಾ ಶಿಕ್ಷಕರ ವಿಭಾಗದ ಹೊರಗಿನ” (OUT OF DIVISION) ಕೋರಿಕೆ ವರ್ಗಾವಣೆ ಕೌನ್ಸಲಿಂಗ್ ನ್ನು ಮುಂದೂಡಿಕೆ ಮಾಡಲಾಗಿದ್ದು ವರ್ಗಾವಣೆಯ ನಿರೀಕ್ಷೆ ಯಲ್ಲಿದ್ದ ಶಿಕ್ಷಕರಿಗೆ ಮತ್ತೊಂದು ಆತಂಕ ಎದುರಾಗಿದೆ.