ಯಾದಗಿರಿ –
ಶಾಲಾ ಮಕ್ಕಳಲ್ಲಿ ನೈತಿಕ ಶಿಕ್ಷಣ ಹೆಚ್ಚಿಸುವ ಸದುದ್ದೇಶದಿಂದ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಅಳವಡಿಕೆ ಮಾಡ ಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಯಿ ಹೇಳಿದರು.ಯಾದರಿಗಿಯ ಜಿಲ್ಲೆಯ ಸುರಾಪುರ ತಾಲ್ಲೂಕಿನ ದೇವತ್ಕಲ್ ಹೆಲಿಪ್ಯಾಡ್ ಡಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು ಶಿಕ್ಷಣ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪಠ್ಯಗಳಲ್ಲಿ ಭಗವದ್ಗೀತೆ ಅಳವಡಿಸುವುದು ಖಚಿತ ಎಂದು ಸ್ಪಷ್ಟಪಡಿ ಸಿದರು.
ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಇದು ಅಳವಡಿಕೆಯಾ ಗಲಿದೆ ಎಂಬುದರ ಬಗ್ಗೆ ಖಾತರಿ ಇಲ್ಲ.ಏಕೆಂದರೆ ಕೆಲವೇ ದಿನಗಳಲ್ಲಿ ಪ್ರಸ್ತಕ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗು ವುದರಿಂದ ಈ ವರ್ಷಕ್ಕೆ ಇದು ಅನ್ವಯವಾಗುವ ಸಾಧ್ಯತೆ ಕಡಿಮೆ ಎಂದು ಸ್ಪಷ್ಟಪಡಿಸಿದರು.ಶಿಕ್ಷಣ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಇದರ ಸಾಧಕ ಬಾಧಕ ಗಳ ಬಗ್ಗೆ ಸರ್ಕಾರಕ್ಕೆ ವರದಿಯನ್ನು ನೀಡಲಿದ್ದಾರೆ ಅಂತಿಮ ವಾಗಿ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನ ತೆಗೆದುಕೊ ಳ್ಳುತ್ತೇವೆ ಎಂದರು.ಇನ್ನೂ ಗುಜರಾತ್ ಸರ್ಕಾರ ಈಗಾಗಲೇ ಅಳವಡಿಕೆ ಮಾಡಿರುವುದರಿಂದ ನಮ್ಮಲ್ಲೂ ಕೂಡ ನೈತಿಕ ಶಿಕ್ಷಣವನ್ನು ಬೆಳೆಸಲು ಭಗವದ್ಗೀತೆ ಸಹಕಾರಿಯಾಗಲಿದೆ ಎಂದು ಅನೇಕರು ಸಲಹೆ ನೀಡಿದ್ದಾರೆ. ಸರ್ಕಾರ ಈ ನಿಟ್ಟಿನ ಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.