ಹೈದರಾಬಾದ್ –
ಇನ್ನೂ ಇತ್ತೀಚೆಗೆ ನಡೆದ ನಾಯಕ ನಟ ಸಂಚಾರಿ ವಿಜಯ್ ಅವರ ಅಪಘಾತ ಸುದ್ದಿ ಇನ್ನೂ ಯಾರು ಮರೆತಿಲ್ಲಿ ಈ ಒಂದು ಸುದ್ದಿ ಮಾಸುವ ಮುನ್ನವೇ ಮತ್ತೋರ್ವ ನಟನಿಗೆ ಅಪಘಾತ ಆಗಿದೆ.ಹೌದು ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಕತ್ತಿ ಮಹೇಶ್ ಅವರು ಚಿತ್ತೂರಿನಿಂದ ಹೈದರಾಬಾದ್ ಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.ಅವರು ಚಲಿಸುತ್ತಿದ್ದ ಇನೊವಾ ಕಾರು ಟ್ರಕ್ ವೊಂದಕ್ಕೆ ಡಿಕ್ಕಿ ಹೊಡಿದಿದೆ ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾ ಗುತ್ತಿದೆ.
ಹೌದು ನಾಯಕ ನಟನಾಗಿ ಮಾತ್ರವಲ್ಲದೆ ವಿಮರ್ಶ ಕನಾಗಿ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ 1ರ ಸ್ಪರ್ಧಿಯಾಗಿಯೂ ಕತ್ತಿ ಮಹೇಶ್ ಫೇಮಸ್ ನೆಲ್ಲೂರಿನ ಹೊರವಲಯದ ಚಂದ್ರಶೇಖರ ಪುರಂ ಬಳಿ ಮಹೇಶ್ ಚಲಿಸುತ್ತಿದ್ದ ಕಾರು ಅಪಘಾತಕ್ಕಿ ಡಾಯಿತು.ಸರಿಯಾದ ಸಮಯಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೆ ಮಾರಣಾಂ ತಿಕ ಗಾಯಗಳಾಗುವುದು ತಪ್ಪಿದೆ ಎನ್ನಲಾಗಿದೆ.
ಮಹೇಶ್ ಅವರ ಇನೊವಾ ಕಾರು ಜಖಂ ಆಗಿದೆ. ಸದ್ಯ ಆ ಫೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿವೆ.ಕಾರು ಜಖಂ ಆಗಿರುವುದು ನೋಡಿದರೆ ಅಪಘಾತದ ತೀವ್ರತೆ ಹೇಗಿತ್ತು ಎಂಬು ದು ಗೊತ್ತಾಗುತ್ತದೆ. ಹಾಗಾಗಿ ಮಹೇಶ್ ಅವರಿಗೆ ಹೆಚ್ಚು ಗಾಯಗಳಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.ಕಿರುಚಿತ್ರಗಳ ಮೂಲಕ ಮಹೇಶ್ ವೃತ್ತಿಜೀವನ ಆರಂಭಿಸಿದ್ದರು.
ಸಿನಿಮಾ ವಿಮರ್ಶೆಯಲ್ಲಿ ವಿವಾದಾತ್ಮಕ ಅಭಿಪ್ರಾ ಯವನ್ನು ವ್ಯಕ್ತಪಡಿಸುವ ಮೂಲಕ ಮಹೇಶ್ ಹೆಚ್ಚು ಖ್ಯಾತಿ ಪಡೆದುಕೊಂಡರು.ನೇನೆ ರಾಜು ನೇನೆಮಂತ್ರಿ ಕ್ರ್ಯಾಕ್, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರಿಗೆ ಅಪಘಾತ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳಿಗೆ ಆತಂಕ ಆಗಿದ್ದು ಬೇಗನೆ ಗುಣ ಮುಖರಾಗಿ ಬರಲೆಂದು ಪ್ರಾರ್ಥನೆ ಮಾಡಿದ್ದಾರೆ