ಬೆಂಗಳೂರು –
ರಾಜ್ಯದ ಲೋಕಸಭಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೇಳಿದ ಹೈಕಮಾಂಡ್ – ಈ ಕೂಡಲೇ ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಚುನಾವಣಾ ಸಮಿತಿಗೆ ನೀಡುವಂತೆ ರಾಜ್ಯಾಧ್ಯ ಕ್ಷರಿಗೆ ಸೂಚನೆ ಹೌದು
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ.ಒಂದು ಕಡೆಗೆ ಎಲ್ಲಾ ರಾಜಕೀಯ ಪಕ್ಷದವರು ಈಗಾಗಲೇ ಸಿದ್ದತೆ ಯನ್ನು ಆರಂಭ ಮಾಡಿದ್ದು ಅಭ್ಯರ್ಥಿಗಳ ಆಯ್ಕೆ ಕಸರತ್ತು ಮಾಡುತ್ತಿದ್ದಾರೆ ಹೀಗಿರುವಾಗ ಇತ್ತ ರಾಜ್ಯದಲ್ಲಿನ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೊಡುವಂತೆ ಬಿಜೆಪಿ ಚುನಾವಣಾ ಸಮಿತಿ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸೂಚನೆಯನ್ನು ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಎಲ್ಲಾ ಹಂತದ ನಾಯಕರ ಜೊತೆ ಇನ್ನೊಂದು ಸುತ್ತಿನ ಸಭೆ ನಡೆಸಿ ಬಿಜೆಪಿ ಚುನಾವಣಾ ಸಮಿತಿಗೆ ಪಟ್ಟಿಯನ್ನು ಕಳುಹಿಸಿ ಕೊಡುವಂತೆ ಕೇಂದ್ರ ವರಿಷ್ಠರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.
ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆ ಮುಕ್ತಾಯವಾದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತಿತರ ಪಕ್ಷದ ಪ್ರಮುಖರ ಜೊತೆ ಮಾತು ಕತೆ ನಡೆಸಿರುವ ವಿಜಯೇಂದ್ರ ಲೋಕಸಭೆ ಚುನಾವಣೆಗೆ ಪೂರ್ವ ಸಿದ್ದತೆ ಕುರಿತಂತೆ ಮಾಹಿತಿ ನೀಡಿದ್ದಾರೆ.ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗ ಆಯ್ಕೆ ಪ್ರದೇಶವಾರು, ಜಾತಿ, ಮತ ದಾರರ ನಾಡಿಮಿಡಿತ ಹೀಗೆ ಪ್ರತಿಯೊಂದು ಅಂಕಿ ಅಂಶಗಳ ವಿವರವುಳ್ಳ ಮಾಹಿತಿಯನ್ನು ವರಿಷ್ಠ ರಿಗೆ ನೀಡಿದ್ದಾರೆ.
ಒಂದೊಂದು ಕ್ಷೇತ್ರಕ್ಕೂ ಮೂರಕ್ಕೂ ಹೆಚ್ಚು ಆಕಾಂಕ್ಷಿಗಳ ಅಭ್ಯರ್ಥಿಗಳ ಪಟ್ಟಿಯನ್ನು ನೀಡ ಲಾಗಿದ್ದು ಅಂತಿಮವಾಗಿ ವರಿಷ್ಠರೇ ತೀರ್ಮಾನಿ ಸಬೇಕೆಂದು ವಿಜಯೇಂದ್ರ ಮನವಿ ಮಾಡಿದ್ದಾರೆ ಪಟ್ಟಿಯನ್ನು ವೀಕ್ಷಣೆ ಮಾಡಿರುವ ವರಿಷ್ಠರು ಇನ್ನೊಂದು ಸುತ್ತಿನ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿ ಅಂತಿಮ ಪಟ್ಟಿಯನ್ನು ಕಳುಹಿಸಿಕೊಡಿ ಇದರಲ್ಲಿ ಯಾರಿಗೆ ಟಿಕಟ್ ನೀಡಬೇಕು ಎಂಬುದನ್ನು ನಾವೇ ತೀರ್ಮಾನಿಸು ತ್ತೇವೆ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ
ಮೂಲಗಳ ಪ್ರಕಾರ ಕೆಲವು ಕ್ಷೇತ್ರಗಳಿಗೆ ಒಂದೇ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ತುಮಕೂರು,ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಉತ್ತರ, ದಾವಣಗೆರೆ, ಕೊಪ್ಪಳ, ಬೆಳಗಾವಿ, ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 10 ರಿಂದ 12 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳ ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದೀಗ ವರಿಷ್ಠರ ಸೂಚನೆಯಂತೆ ವಿಜಯೇಂದ್ರ ವಿಧಾನಮಂಡಲದ ಕಲಾಪ ಮುಗಿದ ನಂತರ ಕೋರ್ ಕಮಿಟಿ ಸಭೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲಿದ್ದು ಏನೇ ನಾಗಲಿದೆ ಯಾರು ಯಾರಿಗೆ ಟಿಕೇಟ್ ಸಿಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..