ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಬಿಜೆಪಿ ಪಕ್ಷ ಮೊದಲ ಹಂತದಲ್ಲಿ 26 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಒಂದು ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಧಾರವಾಡ ದಲ್ಲಿ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಟಿಕೇಟ್ ಆಕಾಂಕ್ಷಿಗಳಾಗಿದ್ದವರಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ತಪ್ಪಿದ್ದಕ್ಕೆ ಬೇಸರಗೊಂಡಿ ದ್ದಾರೆ.
ವಾರ್ಡ್ 3 ರಲ್ಲಿ ಈರೇಶ ಅಂಚಟಗೇರಿ ಅವರಿಗೆ ಈ ಬಾರಿ ಟಿಕೇಟ್ ನೀಡಲಾಗಿದ್ದು ಇನ್ನೂ ಆಕಾಂಕ್ಷಿಯಾ ಗಿದ್ದ ಮಾಜಿ ಪಾಲಿಕೆಯ ಸದಸ್ಯೆಯಾಗಿರುವ ಅನಸುಯಾ ಚೋಳಪ್ಪನವರ ಪುತ್ರ ಮಂಜುನಾಥ ಚೋಳಪ್ಪನವರ ಅವರಿಗೆ ಈಬಾರಿ ಟಿಕೇಟ್ ಸಿಗುತ್ತದೆ ಎನ್ನಲಾಗಿತ್ತು ಅವರು ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದು ಕಳೆದ ಹಲವಾರು ವರುಷಗ ಳಿಂದ ಒಳ್ಳೋಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು.
ಪಕ್ಷ ಏನೇ ಜವಾಬ್ದಾರಿ ನೀಡಿದರು ವಹಿಸಿದರು ಅದನ್ನು ಚಾಚು ತಪ್ಪದೇ ಮಾಡುತ್ತಿದ್ದರು.ಆದರೆ ಟಿಕೇಟ್ ಕೈ ತಪ್ಪಿದ್ದು ಇದರಿಂದಾಗಿ ಮಾಜಿ ಪಾಲಿಕೆ ಯ ಸದಸ್ಯೆಯಾಗಿರುವ ಅನಸುಯಾ ಚೋಳಪ್ಪನ ವರ ಮತ್ತು ಬೆಂಬಲಿಗರು ಅಸಮಾಧಾನಗೊಂಡಿ ದ್ದಾರೆ.
ಹೀಗಾಗಿ ಇವರು ಸಂಜೆ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ.ಮುಂದಿನ ನಿರ್ಧಾರ ಕುರಿತಂತೆ ಸಭೆ ಯನ್ನು ಕರೆದಿದ್ದು ಮಗನನ್ನು ಪಕ್ಷೇತರನ್ನಾಗಿ ಕಣಕ್ಕೇ ಇಳಿಸುತ್ತಾರೆನಾ ಅಥವಾ ಪಕ್ಷದ ಅಭ್ಯರ್ಥಿಗೆ ಇದೊಂ ದು ಬಾರಿ ಬೆಂಬಲವನ್ನು ನೀಡುವ ನಿರ್ಧಾರವನ್ನು ತಗೆದುಕೊಳ್ಳುತ್ತಾರೆನಾ ಎಂಬ ಕುರಿತಂತೆ ಸಂಜೆ ಕರೆದ ಸಭೆಯಲ್ಲಿ ಯಾವ ನಿರ್ಧಾರ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕು.