ಧಾರವಾಡ –
ಮಾಜಿ ಸಚಿವರ ವಿರುದ್ಧ ಸಿಡಿ ಕೇಸ್ ಪ್ರಕರಣದ ವಿಚಾರದಲ್ಲಿ ಯುವತಿ ತಂದೆ ದಾಖಲಿಸಿದ್ದ ಹೆಬಿ ಯಸ್ ಕಾರ್ಪಸ್ ಅರ್ಜಿ ಇತ್ಯರ್ಥವಾಗಿದೆ.ಅರ್ಜಿ ವಿಚಾರಣೆ ವೇಳೆ ಲಿಖಿತ ಹೇಳಿಕೆಯನ್ನು ಆ ಸಿಡಿ ಲೇಡಿ ನೀಡಿದ್ದಾರೆ.ವಿಡಿಯೋ ದ ಮೂಲಕ ಯುವತಿ ಬೆಂಗಳೂರಿನಿಂದ ಹಾಜರಾಗಿದ್ದರು.ಮಗಳನ್ನು ಹುಡುಕಿಕೊಡಿ ಎಂದು ಯುವತಿಯ ತಂದೆ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಒಂದು ಅರ್ಜಿಯನ್ನು ಸಲ್ಲಿಸಿದ್ದರು.ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಯಿತು.ಈ ಕುರಿತಂತೆ ಯುವತಿಯ ತಂದೆ ಮೇ 27 ರಂದು ಅರ್ಜಿಯನ್ನು ಸಲ್ಲಿಸಿದ್ದರು.
ಯುವತಿ ತಂದೆ ಮತ್ತು ಯುವತಿಯ ವಿಚಾರಣೆ ನಡೆದ ವಿಡಿಯೋ ಸಂವಾದದ ವಿಚಾರಣೆ ವೇಳೆ ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿದರು.ಸದ್ಯ ಬೆಂಗಳೂರಿನಲ್ಲಿ ವಾಸ ಆಗಿದ್ದೇನೆ ನನ್ನ ಮೇಲೆ ಯಾರ ಒತ್ತಡ ಇಲ್ಲ ಸದ್ಯಕ್ಕೆ ನಾನು ತಂದೆ ತಾಯಿ ಬಳಿ ಹೋಗಲು ಇಚ್ಚಿಸುವುದಿಲ್ಲ ಎಂದು ಹೇಳಿಕೆಯನ್ನು ಆ ಯುವತಿ ಹೇಳಿದರು. ಹೇಳಿಕೆ ಬಳಿಕ ಅರ್ಜಿ ಇತ್ಯರ್ಥ ಪಡಿಸಿದ ನ್ಯಾಯಾಲ ಯ ಎಸ್ಐಟಿ ವಿಚಾರಣೆ ಮುಗಿದ ಬಳಿಕ ತಂದೆ ಭೇಟಿಯಾಗೋ ದಾಗಿ ಹೇಳಿಕೆಯನ್ನು ನೀಡಿದ್ದಾರೆ. ಇದರೊಂದಿಗೆ ಈ ಒಂದು ಅರ್ಜಿಯ ವಿಚಾರಣೆ ಯನ್ನು ನ್ಯಾಯಾಲಯ ಅಂತಿಮಗೊಳಿಸಿದೆ.