ಪಂಜಾಬ್ –
CM ಕಾರ್ಯಕ್ರಮ ದನಂತರ ಶಾಲಾ ಶಿಕ್ಷಕರು ಊಟಕ್ಕಾಗಿ ಮುಗಿಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಶಾಲಾ ಶಿಕ್ಷಣದ ಮಿತಿಯನ್ನು ಹೆಚ್ಚಿಸುವ ಸಂಬಂಧ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ರೆಸಾರ್ಟ್‌ವೊಂದರಲ್ಲಿ ಶಾಲಾ ಶಿಕ್ಷಕರು ಮತ್ತು ಪ್ರಾಂಶು ಪಾಲರನ್ನು ಭೇಟಿ ಮಾಡಿದರು.ಚರ್ಚೆಯ ನಂತರ ಅಲ್ಲಿ ಏರ್ಪಡಿಸಲಾಗಿದ್ದ ಉಚಿತ ಊಟಕ್ಕೆ ಶಿಕ್ಷಕರು ತಟ್ಟೆ ಹಿಡಿದು ಮುಗಿಬಿದ್ದಿದ್ದಾರೆ.ಈ ಘಟನೆಯ ಪೊಟೊ ಗಳು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಶಾಲಾ ಶಿಕ್ಷಣದ ಮಿತಿಯನ್ನು ಹೆಚ್ಚಿಸಲು ಸಿಎಂ ಭಗವಂತ್ ಮಾನ್ ಸರ್ಕಾರಿ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರ ಸಭೆ ಯನ್ನು ಕರೆದಿದ್ದರು.ಆದರೆ ಸಭೆ ಮುಗಿದ ತಕ್ಷಣ ಶಿಕ್ಷಕರು ಊಟದ ಕೋಣೆಗೆ ತೆರಳಿ ತಟ್ಟೆಗಳನ್ನು ಪಡೆಯಲು ಒಬ್ಬರ ಮೇಲೊಬ್ಬರು ನೂಕಾಡಿದ್ದಾರೆ.