ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಬಳಿಕ ಫೀಲ್ಡಿಗೆ ಇಳಿದನಾ ಮಗ..?

Suddi Sante Desk

ಧಾರವಾಡ :

ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಬಳಿಕ ಫೀಲ್ಡಿಗೆ ಇಳಿದನಾ ಮಗ..? ಎಂಬ ಅನುಮಾನ ಈಗ ಕಾಡುತ್ತಿದೆ.ಫ್ರೂಟ್ ಇರ್ಫಾನ್ ಮಗನಿಂದ ವ್ಯಾಪಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಲಾಗಿ ದೆಯಂತೆ‌. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದ ಹೊರಹೊಲಯದ ರಮ್ಯಾ ರೆಸಿಡೆನ್ಸಿ ಬಳಿ ಈ ಒಂದು ಘಟನೆ ನಡೆದಿದೆ‌.ಮೊಹಮ್ಮದ್ ಕುಡಚಿ, ಅಲ್ತಾಫ್ ಮಾಲಿ ಎನ್ನುವ ವ್ಯಾಪಾರಿಗಳಿಗೆ ಹಣದ ಬೇಡಿಕೆಯನ್ನು ಇಡಲಾಗಿದೆಯಂತೆ.ಫ್ರೂಟ್ ಇರ್ಫಾನ್ ಹುಬ್ಬಳ್ಳಿಯಲ್ಲಿ ಹತ್ಯೆಯಾದ ರೌಡಿಶೀಟರ್ ಫ್ರೂಟ್ ಇರ್ಫಾನ್ ಮಗ ಅರ್ಬಾಜ್ ಸಯ್ಯದ್ ಸೇರಿ, ರಹಿಮ್ ಶಾನು ಮತ್ತು ಅರ್ಬಾಜ್ ಧಮ್ಕಿ ಹಾಕಲಾಗಿದೆಯಂತೆ.

ಹಣ ನೀಡದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಮಚ್ಚು, ಬಂದೂಕು ತೋರಿಸಿ ಧಮ್ಕಿ ಹಾಕಿದ್ದಾರಂತೆ ಫ್ರೂಟ್ ಇರ್ಫಾನ್ ಮಗ. ತಂದೆ ಸಾವಿನ ಬಳಿಕ ಗುಂಪು ಕಟ್ಟಿಕೊಂಡು ಫೀಲ್ಡಿಗೆ ಇಳಿದ ಅರ್ಬಾಜ್ ಬೆದರಿಕೆ, ಹಫ್ತಾ ವಸೂಲಿಗೆ ಹೆಸರಾಗಿದ್ದ ಫ್ರೂಟ್ ಇರ್ಫಾನ್ ಅವನ ಹಾದಿಯಲ್ಲೇ ಮಗನೂ ಸಹ ಜನರಿಂದ ಸುಲಿಗೆಗೆ ಮುಂದಾದ್ನಾ ಮಗ ಎಂಬ ಅನುಮಾನ ಕಾಡುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.