ಬೆಂಗಳೂರು –
ಮಹಾಮಾರಿ ಕರೋನಾ ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯಾಧ್ಯಂತ ಈಗಾಗಲೇ ಲಾಕ್ ಡೌನ್ ಜಾರಿಗೆ ಮಾಡಲಾಗಿದೆ.ಇನ್ನೂ ಈ ಒಂದು ಸಮಯದಲ್ಲಿ ಪ್ರತಿದಿನ ಆರು ಘಂಟೆಯಿಂದ ಹತ್ತು ಘಂಟೆ ಯವರೆಗೆ ದಿನ ಬಳಕೆಯ ವಸ್ತುಗಳ ಖರೀದಿ ಗೆ ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿದೆ. ಕೇವಲ ನಾಲ್ಕು ಘಂಟೆಗಳ ಕಾಲ ಅವಕಾಶವನ್ನು ನೀಡಿದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನದ ಟ್ಟಣೆ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದನ್ನು ಅರಿತ ರಾಜ್ಯ ಸರ್ಕಾ ರ ಈಗ ಮತ್ತೊಂದು ಹೊಸ ಆದೇಶವನ್ನು ಮಾಡಿದೆ.

ಹೌದು ಎಲ್ಲಾ ರೀತಿಯ ಸಂತೆಗಳನ್ನು ನಿರ್ಭಂದ ಮಾಡಿ ಸಧ್ಯ ಬೆಳಿಗ್ಗೆ 6 ಗಂಟೆಯಿಂದ ಹತ್ತು ಗಂಟೆಯ ವರೆಗೆ ಇದ್ದ ಸಮಯವನ್ನು 12 ಗಂಟೆಯವರೆಗೆ ಎಪಿಎಮ್ ಸಿ ಮತ್ತು ದಿನಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶವನ್ನು ಎರಡು ಗಂಟೆಗಳ ಕಾಲ ಹೆಚ್ಚಿನ ಸಮಯವನ್ನು ನೀಡಿ ಅವ ಕಾಶವನ್ನು ನೀಡಲಾಗಿದೆ.

ಇನ್ನೂ ಇದರೊಂದಿಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಲಿನ ಕೇಂದ್ರಗಳನ್ನು ಹಣ್ಣು ಹಂಪಲ ತರಕಾರಿ ಮಾರಾಟಕ್ಕೆ ಅವಕಾಶವನ್ನು ನೀಡಲಾಗಿದೆ ಯಾವುದೇ ಕಾರಣಕ್ಕೂ ದುಬಾರಿ ಬೆಲೆಗೆ ಮಾರಾಟವನ್ನು ಮಾಡದೇ ಸರ್ಕಾರ ನಿಗದಿ ಮಾಡಿದ ದರದಲ್ಲೇ ಮಾರಾಟ ಮಾಡಲು ಸೂಚಿಸ ಲಾಗಿದೆ.ಈ ಕುರಿತಂತೆ ನಾಳೆಯಿಂದ ಈ ಒಂದು ಆದೇಶ ಜಾರಿಗೆ ಬರುವಂತೆ ಸರ್ಕಾರ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಆದೇಶ ಮಾಡಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.