ಹುಬ್ಬಳ್ಳಿ –
ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲೂ ಸಾರಿಗೆ ನೌಕರರ ಈಗಾಗಲೇ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಪ್ರತಿಭಟನೆ ಹಿನ್ನಲೆಯಲ್ಲಿ ಇಲಾಖೆಯ ಅಧಿಕಾರಿಗಳು ನಗರ ಸಾರಿಗೆ ಘಟಕ 1 ರಲ್ಲಿ ನೌಕರ ರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುತ್ತಿ ದ್ದಾರೆ.

ಹೌದು ನಾಳೆಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ನಾಳೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬೇಡಿ ಕರ್ತವ್ಯಕ್ಕೆ ಹಾಜರಾಗು ವಂತೆ ಹೇಳುತ್ತಿದ್ದಾರೆ.

ಇದಕ್ಕೆ ಒಪ್ಪದ ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ನಾವು ನಾಳೆ ಕರ್ತವ್ಯಕ್ಕೆ ಬರೊದಿಲ್ಲ ಎಂದು ಖಡಕ್ ಸೂಚನೆ ನೀಡಿದರು.

ಇನ್ನೂ ಈ ಒಂದು ಸಮಯದಲ್ಲಿ ಇಲಾಖೆಯ ಅಧಿಕಾರಿಗಳಾದ ವಿಶ್ವಜ್ಞ ವಿವೇಕಾನಂದ, ಪರಮೇಶ್ವ ರ ,ನಾಯಕ, ಜಾನಗೌಡರ,ಶ್ರೀಶೈಲ, ಸೇರಿದಂತೆ ಅಧಿಕಾರಿಗಳು ನೌಕರರನ್ನು ಮನವೊ ಲಿಸಲು ಮುಂದಾದರು ಕಾರ್ಮಿಕ ಸಂಘಟನೆ ಮುಖಂಡ ರಾದ ಮಂಜುನಾಥ ನಾಯ್ಕರ್ ಸೇರಿ ಹಲವರು ಉಪಸ್ಥಿತರಿದ್ದು ಯಾವುದೇ ಕಾರಣಕ್ಕೂ ಅಧಿಕಾರಿ ಗಳ ಮಾತಿಗೆ ಒಪ್ಪಲಿಲ್ಲ