ಧಾರವಾಡ –
ಶಿಕ್ಷಕ ದಿನಾಚರಣೆ ಮುನ್ನವೇ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಕ ಸಂಘದ ಅಧ್ಯಕ್ಷ ಅಜಿತ ಕುಮಾರ ದೇಸಾಯಿ
ಹೌದು ಶಿಕ್ಷಕರ ದಿನಾಚರಣೆ ಮುನ್ನವೇ ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ಧಾರವಾಡ ಶಿಕ್ಷಕ ಸಂಘದ ಅಧ್ಯಕ್ಷ ಧಾರವಾಡ ತಾಲೂಕಿನ ಶಿಕ್ಷಕ ಶಿಕ್ಷಕಿಯರಿಗೆ ನೀಡಿದ್ದಾರೆ.
ಶಿಕ್ಷಕ ದಿನಾಚರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕ್ರಿಡಾ ಸ್ಪರ್ಧೆಗಳು ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಕಾರ್ಯ ಗಳನ್ನು ಪ್ರಕಟಿಸಿದರು ಈ ವರ್ಷದಿಂದ ತಾಲೂಕಿನ ಶಿಕ್ಷಕ-ಶಿಕ್ಷಕಿಯರಿಗೆ ಅವರ ವೇತನದ ವಿವರ ಫಾರ್ಮ ನಂ.16, ಹಾಗೂ ವೇತನ ಪ್ರಮಾಣ ಪತ್ರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತವಾಗಿ ವಿತರಿಸುವ ವ್ಯವಸ್ಥೆ ಯನ್ನು ಮಾಡುವದಾಗಿ ತಿಳಿಸಿದರು.
ವೇತನ ತೆರಿಗೆ ಕಟ್ಟುವ ವ್ಯವಸ್ಥೆಯನ್ನು ಉಚಿತವಾಗಿ ಹುಬ್ಬಳ್ಳಿಯ S S S ಎಂಟರ್ ಪ್ರೈಜಸ್ ಇವರ ನೆರವಿ ನೊಂದಿಗೆ ಉಚಿತವಾಗಿ ಮಾಡಿಸಿ ಕೊಡಲಾಗುವುದು ಎಂದು ತಿಳಿಸಿದರು.ಶಿಕ್ಷಕರು ತಮ್ಮ ಸೇವಾ ವಿವರ ಮತ್ತು ವೇತನದ ಮಾಹಿತಿ ಪ್ರಧಾನ ಕಾರ್ಯದರ್ಶಿ S ಕಮ್ಮಾರ ಇವರ ಕಡೆ ಕೊಡಬಹುದೆಂದರು. ಕೋವಿಡ್ ಕಾರ್ಯ ಮಾಡಿದ ಎಲ್ಲರಿಗೆ (ಗಳಿಕೆ ರಜೆ) ಜಮಾ ಮಾಡಿಸಲಾಗಿದೆ. ಮುಂದಿನ ತಿಂಗಳ ಎಲ್ಲರಿಗೂ ಗಳಿಕೆ ರಜೆ ನಗದೀಕರಣ ಮಾಡಿಸಲಾಗುವುದು ಎಂದು ತಿಳಿಸಿದರು.
ಸದ್ಯದಲ್ಲಿ ಗುರು ಸ್ಪಂದನೆ ಕಾರ್ಯಕ್ರಮ ಮಾಡಿಸುತ್ತಿದ್ದು ಶಿಕ್ಷಕ ದಿನಾಚರಣೆ ದಿನ ಉದ್ಘಾಟನೆ ಮಾಡಲಾಗುವುದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕ ನವರ ತಿಳಿಸಿದ್ದಾರೆ.ಇದೆ ತಿಂಗಳ ಪ್ರಧಾನ ಗುರುಗಳ ಬಡ್ತಿ ಕೊಡುವದಾಗಿ ಉಪನರ್ದೇಶಕರಾದ ಎಸ್.ಎಸ್ ಕೆಳದಿ ಮಠ ತಿಳಿಸಿದ್ದಾರೆ.ಸಂಘದ ಜಿಲ್ಲಾ ಅಧ್ಯಕ್ಷರಾದ ವ್ಹಿ.ಎಫ್. ಚುಳಕಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಕೂಡಾ ಈ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡು ತ್ತಿದ್ದಾರೆ ಎಂದರು.ನೂತನ ಪಿಂಚಣಿ ಯೋಜನೆ ರದ್ದುಗೊ ಳಿಸವುದು.
ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ರಾಷ್ಟ್ರ ಮಟ್ಟದಲ್ಲಿ ಅಖಿಲಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ನ ರಾಷ್ಟ್ರೀಯ ಕಾರ್ಯಧ್ಯ ಕ್ಷರಾದ ಬಸವರಾಜ ಗುರಿಕಾರ ಇವರ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಶಂಬುಲಿಂಗನಗೌಡ ಪಾಟೀಲ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಇವರ ನೇತೃತ್ವದಲ್ಲಿ ವಿನೂತನ ಸಹಿ ಸಂಗ್ರಹಣಾ ಮಹಾ ಅಭಿಯಾನ ನಡೆಯುತ್ತಿದ್ದು ಇಂದು ಒಂದೇ ದಿನ ಸುಮಾರು 500 ಜನ ಶಿಕ್ಷಕ ಶಿಕ್ಷಕಿಯರು ಸಹಿ ಮಾಡುವ ಮುಖಾಂತರ ನಮ್ಮಲ್ಲಿ ಚಳಿವಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಂತೋಷ ಹಂಚಿಕೊಂಡರು.