ಧಾರವಾಡ –
ದೀಪಾವಳಿ ಹಬ್ಬದ ಅಂಗವಾಗಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಆಕಾಶ ಬುಟ್ಟಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಧಾರವಾಡದ ಮಾಳಮಡ್ಡಿಯ ಸರ್ಕಾರಿ ಶಾಲೆ ಮುಂದೆ ವೀರ್ ಸಾವರ್ಕರ್ ಗೆಳೆಯರ ಬಳಗದವರು ಆಯೋಜಿಸಿದ್ದರು.ಆಕಾಶ ಬುಟ್ಟಿ ಉತ್ಸವಕ್ಕೇ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದ್ರು.
ಆಕಾಶ ಬುಟ್ಟಿಯನ್ನು ಹಾರಿ ಬೀಡುವ ಮೂಲಕ ಉತ್ಸವಕ್ಕೇ ಶಾಸಕರು ಚಾಲನೆ ನೀಡಿದರು.ನಂತರ ಆಕಾಶ ಬುಟ್ಟಿ ಹಾಕೊದು ಹಾರಿಸೋದು ನಮ್ಮ ಸಂಸ್ಕ್ರತಿ ಸಂಪ್ರದಾಯವಾಗಿದ್ದು. ಹೀಗಾಗಿ ಉತ್ಸವದಲ್ಲಿ ಬಗೆ ಬಗೆಯ 150 ರಿಂದ 200 ಆಕಾಶ ಬುಟ್ಟಿಗಳು ನೋಡಲು ಕಂಡು ಬಂದವು. ಇನ್ನೂ ಇದರೊಂದಿಗೆ ಉತ್ಸವದಲ್ಲಿ ಪ್ರಮುಖವಾಗಿ ಆಕಾಶ ಬುಟ್ಟಿ ಕುರಿತಾದ ಮಾಹಿತಿ ಜಾಗೃತಿಯನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.
ಅಲ್ಲದೇ ಹಬ್ಬ ಹರಿದಿನಗಳಲ್ಲಿ ಇದೊಂದು ನಮ್ಮ ಸಂಸ್ಕ್ರತಿ ನಮ್ಮ ಪರಂಪರೆಯಾಗಿದ್ದು ಅದರ ಮಹತ್ವವನ್ನು ಉತ್ಸವದಲ್ಲಿ ಪರಿಚಯಿಸಿ ಹೇಳಲಾಯಿತು.ಈ ಮಧ್ಯೆ ಇದೇ ಮೊದಲ ಬಾರಿಗೆ ನಗರದಲ್ಲಿ ಆಕಾಶ ಬುಟ್ಟಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಆಕಾಶ ಬುಟ್ಟಿ ಉತ್ಸವದಲ್ಲಿ ಬಗೆ ಬಗೆಯ ಆಕಾಶ ಬುಟ್ಟಿಗಳ ಅನಾವರಣವಾಯಿತು.
ಧಾರವಾಡದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರಪ್ರಥಮ ಬಾರಿಗೆ ದೀಪಾವಳಿ ಆಕಾಶ ಬುಟ್ಟಿ ಉತ್ಸವ -2020ಕ್ಕೆ ವಿಶೇಷವಾಗಿ ಅದರಲ್ಲೂ ಅರ್ಥಪೂರ್ಣವಾಗಿ ನಡೆಯಿತು.ಸಾರ್ವಜನಿಕರು ಕೂಡಾ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡು ಕಣ್ಣ ತುಂಬಾ ವೆರೈಟಿ ವೆರೈಟಿ ಆಕಾಶ ಬುಟ್ಟಿಗಳನ್ನು ನೋಡಿ ಆನಂದಿಸಿ ಹಬ್ಬದೊಂದಿಗೆ ನಮ್ಮ ಸಂಸ್ಕ್ರತಿ ಪರಂಪರೆಯನ್ನು ತಿಳಿದುಕೊಂಡರು. ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮಿಜಿ ಸಂಘದ ಪ್ರಮುಖರಾದ ಶ್ರೀಧರ್ ನಾಡಗೇರ್ ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಸಂಜಯ ಕಪಟಕರ ಧಾರವಾಡ ವಿಭಾಗದ ಎಸಿಪಿ ಶ್ರೀಮತಿ ಅನುಷಾ ಸೇರಿದಂತೆ ಹಾಗೂ ವೀರ ಸಾವರ್ಕರ್ ಗೆಳೆಯರ ಬಳಗದ ಮುಖಂಡರು ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದ್ರು.