ಧಾರವಾಡ ಹುಬ್ಬಳ್ಳಿ –
ಹೌದು ಇದೊಂದು ಅತ್ಯಂತ ಶ್ರೇಷ್ಟ ಮಾನವೀಯ ಕಾರ್ಯ,ಇಂದು ಡಾ ಕೃಷ್ಣಪ್ರಸಾದ ಅವರನ್ನು ಧಾರವಾಡ ಜಿಲ್ಲೆಯ ಸಂಪನ್ಮೂಲ ಶಿಕ್ಷಕರಾದ ವಿ ಎನ್ ಕೀರ್ತಿವತಿ ಭೇಟಿಯಾಗಿ ಉ. ಕ. ದ ಮಕ್ಕಳಿಗೆ ನೇತ್ರ ತಪಾಸಣೆಯನ್ನು ಉಚಿತವಾಗಿ ಮಾಡುವ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಕುಂದ ಗೋಳ ತಾಲೂಕಿನ ಶಾಸಕರಾದ ಕುಸುಮಾವತಿ ಶಿವಳ್ಳಿ ಮೇಡಂ ಹಾಗೂ ಸಂಪನ್ಮೂಲ ಶಿಕ್ಷಕ ಕೆ ಎಂ ಗೆದಗೇರಿ ಹಾಜರಿದ್ದು ನಮಗೆ ಸಹಕರಿಸಿದರು.
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಬೋಗೂರಿನ.ಮಹೇಶ ಸಂಗೊಳ್ಳಿ ಎಂಬ ಮಗು 3 ನೇ ತರಗತಿಯಲ್ಲಿ HPS ಬೋಗೂರಿನಲ್ಲಿ ಕಲಿಯುತ್ತಿ ದ್ದ ಶಾಲೆಗೆ home work ಹಾಕಿಸಿಕೊಳ್ಳಲು ಬಂದಾಗ ಅವನ ಕಣ್ಣಿಗೆ ಕಟ್ಟಿಗೆ ತಾಗಿ ಯಡಗಣ್ಣು ಕಾಣಿಸದಂತಾಯಿತು.
ಸಂಪನ್ಮೂಲ ಶಿಕ್ಷಕಿ ಕೀರ್ತಿವತಿ ಅವನನ್ನು RBSk ಡಾ.ಹತ್ತಿರ ಕರೆದುಕೊಂಡು ಹೋದರು ಸಿವಿಲ್ ಆಸ್ಪತ್ರೆಗೆ ತೋರಿಸಿದರು,. ಅಲ್ಲಿ ಕಣ್ಣು ಕಾಣಿಸಲಿಕ್ಕಿಲ್ಲ ಅಂತ ಹೇಳಿದಾಗ ಅವರಿಗೆ ತುಂಬಾ ಬೇಸರವಾಗಿ M.M ಜೋಶಿ ಆಸ್ಪತ್ತೆಗೆ ಅವನನ್ನು ಕರೆದು ಕೊಂಡು ಹೋದರು. ಅಲ್ಲಿ ಅವನನ್ನು ಪರೀಕ್ಷಿಸಿ.ಆಪರೇಶನ್ ಆದರೆ ಖಂಡಿತಾ ಕಣ್ಣು ಕಾಣಿಸುತ್ತದೆ ಎ೦ದು ಹೇಳಿ ದರು.ಆದರೆ ಖರ್ಚು 50ಸಾವಿರ ಬರುತ್ತದೆಂದು ಹೇಳಿದರು.ತೀರಾ ಬಡವರಾದ ಇವರಿಗೆ ಖರ್ಚು ಹೇಗೆ ಭರಿಸಬೇಕೆಂದು ನನಗೆ ಚಿಂತೆಯಾಯಿತು. ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರು ಭೀಮಪ್ಪ ಕಾಸಾಯಿ ಎಲ್ ಐ ಲಕ್ಕಮ್ಮನವರ ಚಂದ್ರಶೇಖರ ತಿಗಡಿ ಮುಂತಾದವರ ಸಲಹೆಯ ಮೇರೆಗೆ ಡಾ. ಕೃಷ್ಣಪ್ರಸಾ ದರನ್ನು ಭೇಟಿಯಾಗಿ ಪರಿಸ್ಥಿತಿ ಹೇಳಿದಾಗ ಅವರು ದಾನಿಗಳನ್ನು ಹಿಡಿದು ಉಚಿತ ಆಪರೇಶನ್ ಮಾಡಿ ಸಿದರು.ನನಗಂತೂ ಸಾರ್ಥಕ ಭಾವನೆ ಎನ್ನಿಸಿತು. ತುಂಬಾ ಖುಷಿಯಾಯಿತು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಸುದ್ದಿ ಸಂತೆ ಗೆ ತಿಳಿಸಿದರು.