ಹೆಣ್ಣಿನ ಸ್ವಾತಂತ್ರ್ಯ ಕಸಿಯಲು ಯತ್ನ- ಡಾ.ಲತಾ.ಎಸ್. ಮುಳ್ಳೂರ ಖಂಡನೆ…..ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸರ್ವ ಸದಸ್ಯರ ಧ್ವನಿಯಾಗಿ ಖಂಡನೆ…..

Suddi Sante Desk

ಧಾರವಾಡ –

ಹೆಣ್ಣಿನ ಶೋಷಣೆ,ಹೆಣ್ಣಿನ ಸ್ವಾತಂತ್ರ್ಯ ಕಸಿಯುವ ಯತ್ನಗಳು ನಡೆಯುತ್ತಲೆ ಇವೆ.ಇದಕ್ಕೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪ್ರಕರಣ ಶಿಕ್ಷಣ ವಯಲದಲ್ಲಿ ನಡೆದಿರುವುದು ವಿಷಾದ ನೀಯ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸರ್ವ ಸದಸ್ಯರ ಧ್ವನಿಯಾಗಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಹೇಳಿ ಕಟುವಾಗಿ ಖಂಡಿಸಿದ್ದಾರೆ.

ಎಲ್ಲಾ ಶಿಕ್ಷಕ ಶಿಕ್ಷಕಿಯರು ತಮಗಿಷ್ಟವಾದ ಉಡು ಪನ್ನು ಧರಿಸಲು ಸ್ವಾತಂತ್ರ್ಯವಿದೆ.ಆದರೆ ಸಭ್ಯ ಉಡುಪಾಗಿರಲಿ ಎಂದು 2017 ರಲ್ಲಿ ಘನ ಸರ್ಕಾರವು ಅಧಿಕೃತವಾಗಿ ಘೋಷಣೆ ಮಾಡಿತ್ತು ಅದರಂತೆ ಶಿಕ್ಷಣ ಇಲಾಖೆಯ ನಿರ್ದೇಶಕರು ಕೂಡ ದಿನಾಂಕ 28:07:2017 ರಲ್ಲಿ ತಮ್ಮ ಆದೇಶ ಸಂಖ್ಯೆ ಎಡಿಎಂ೨(೧)ಸ ಉಡುಪು/2016-17 ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಅದರಂತೆ ಎಲ್ಲಾ ಬೋಧಕ ವಲಯದ ಶಿಕ್ಷಕಿಯರು ಸಬ್ಯ ಉಡುಪಗಳಾದ ಸೀರೆ ಅಥವಾ ಚೂಡಿದಾರ್ ತೊಡಲು ಅವಕಾಶ ಕಲ್ಪಿಸಲಾಗಿದೆ.ಇದನ್ನು ಸಹಿಸದ ಕೆಲವು ಪುರುಷ ಶಿಕ್ಷಕರು,ಶಿಕ್ಷಕಿಯರಿಗೆ ಸೀರೆಯನ್ನೇ ತೊಡಲು ಸೂಚಿಸುವಂತೆ ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುತ್ತಾರೆ,ಇದು ಅವರ ಅಸಹನೆಯನ್ನು ಬಿಂಬಿಸುತ್ತಿದೆ‌.ಹಾಗೂ ಮಹಿಳೆಯರ ಸ್ವಾತಂತ್ರ್ಯ ಕಸಿಯುವ ಯತ್ನವಾಗಿದೆ. ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಖಂಡಿಸಿದೆ.

ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ ರವರು ಕಟುವಾಗಿ ಟೀಕಿಸಿ ಮಾತನಾಡಿದ್ದಾರೆ.ಅಂತವರ ಮನವಿಯನ್ನು ತಿರಸ್ಕರಿಸಿರುವ ಚಿಕ್ಕಮಗಳೂರು ಜಿಲ್ಲಾ ಮಾನ್ಯ ಉಪನಿರ್ದೇಶಕರು ಸಬ್ಯ ಉಡುಪು ಧರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ.ಇದರ ಬಗ್ಗೆ ಯಾರೂ ಕೂಡ ಆಕ್ಷೇಪ ಸಲ್ಲಿಸಬಾರದೆಂದು ಸೂಚಿಸಿರುತ್ತಾರೆ

ಅವರ ಈ ಅದೇಶವನ್ನು ನಮ್ಮ ಸಂಘವು ಸ್ವಾಗತಿ ಸುತ್ತದೆ ಮನವಿಯನ್ನು ತಿರಸ್ಕರಿಸಿ ಶಿಕ್ಷಕಿಯರ ಸ್ವಾತಂತ್ರ್ಯಪರ ಸೂಕ್ತ ನಿರ್ಣಯತೆಗೆದುಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಮಾನ್ಯ ಉಪನಿರ್ದೇಶಕ ರವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಹೆಚ್.ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.