ಬೆಂಗಳೂರು –
ಸೆಕ್ಸ್ ಸಿಡಿ ಅಪ್ಲೋಡ್ ಮಾಡುವ ಮುನ್ನ ಬೆಂಗಳೂರಿನ RT ನಗರದಲ್ಲಿ ಸಭೆ ಮಾಡಿದ್ದರಂತೆ. ಈ ಒಂದು ವಿಚಾರ ಪೊಲೀಸರ ತನಿಖೆಯಿಂದ ಹೊರಬಂದಿದೆ.ಇನ್ನೂ ಈ ಒಂದು ಪ್ರಕರಣದಲ್ಲಿ ಪೊಲೀಸರ ಚುರುಕು ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಈವರೆಗೆ ಐವರನ್ನ ವಶಪಡಿಸಿ ಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಮಾರ್ಚ್ ಎರಡರಂದು ಸಿಡಿ ಬಿಡುಗಡೆ ಯಾಗುವ ಒಂದು ದಿನ ಮುನ್ನ ಅಂದರೆ ಮಾರ್ಚ್ 1ರಂದು ಈ ಐವರು ಯುವಕರು ಆರ್.ಟಿ. ನಗರದ ಅಜ್ಞಾತ ಸ್ಥಳವೊಂದರಲ್ಲಿ ಸಭೆ ನಡೆಸಿದ್ದರು. ಒಂದು ಗಂಟೆಗೂ ಅಧಿಕ ಕಾಲ ಆ ಸ್ಥಳದಲ್ಲಿ ಸೇರಿದ್ದ ಈ ಯುವಕರು ಸಿಡಿ ವಿಚಾರವನ್ನು ಚರ್ಚಿಸಿದ್ದರು. ಅದಾಗಿ ಮರುದಿನ ಸಿಡಿ ಬಿಡುಗಡೆಯಾಗಿದೆ. ನಂತರ ಈ ಯುವಕರು ಪ್ರತ್ಯೇಕಗೊಂಡಿದ್ದಾರೆ ಎಂಬ ಅಂಶ ಈಗ ಪೊಲೀಸರಿಂದ ಬೆಳಕಿಗೆ ಬಂದಿದೆ.

ಈ ಯುವಕರು ಸಿಡಿ ಬಿಡುಗಡೆಗೆ ಮುನ್ನ ಸಭೆ ಸೇರಿದ್ದವರ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದು ಮೊಬೈಲ್ ಲೊಕೇಶನ್ ವಿವರಗಳು. ಮಾರ್ಚ್ ಒಂದರಂದು ಈ ಐವರು ಯುವಕರ ಟವರ್ ಲೊಕೇಶನ್ ಒಂದೇ ಕಡೆ ಇದ್ದದ್ದು ಗೊತ್ತಾಯಿತು. ಪೊಲೀಸರು ಈ ಯುವಕರನ್ನ ಇದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.