ಬೆಂಗಳೂರು –
ಕರ್ನಾಟಕದ ಖ್ಯಾತ ಆಲ್ ರೌಂಡರ್, ರಾಜ್ಯದಲ್ಲಿ ಎರಡು ರಣಜಿ ಟ್ರೋಫಿ ಗೆದ್ದು ಕೊಟ್ಟ ನಾಯಕ ಮತ್ತು ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಕ್ರಿಕೆಟರ್ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಎರಡು ಪುಟಗಳ ಪತ್ರವನ್ನು ಬರೆದು ಅದನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ವಿನಯ್ ಕುಮಾರ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಭಾರತದ ರಾಷ್ಟ್ರೀಯ ತಂಡಕ್ಕೆ 2010 ರಲ್ಲಿ ಜಿಂಬಾಂಬ್ವೆ ವಿರುದ್ಧ ಏಕದಿನ ಪಂದ್ಯಕ್ಕೆ ಮೊದಲು ಪಾದಾರ್ಪಣೆ ಮಾಡಿದ್ದ ವಿನಯ್ ಕುಮಾರ್ ಭಾರತದ ಪರ ಒಟ್ಟು 31 ಪಂದ್ಯಗಳನ್ನು ಆಡಿದ್ದು, 31 ವಿಕೆಟ್ ಕಬಳಿಸಿದ್ದಾರೆ. ಒಂದು ಬಾರಿ ನಾಲ್ಕು ವಿಕೆಟ್ ನ್ನು ಸಾಧಿಸಿದ್ದಾರೆ.
ಇನ್ನೂ ಆಸ್ಟ್ರೇಲಿಯಾ ವಿರುದ್ಧ 2012ರಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿರುವ ವಿನಯ್ ಕುಮಾರ್ 1 ವಿಕೆಟ್ ಕಬಳಿಸುವಲ್ಲಿ ಮಾತ್ರ ಸಫಲರಾಗಿದ್ದಾರೆ.ಏನೇ ಆಗಲಿ ರಾಜ್ಯದ ಮತ್ತೊಬ್ಬ ಪ್ರತಿಭಾವಂತ ಕ್ರಿಕೆಟ್ ಆಟಗಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದು ಬೇಸರದ ಸಂಗತಿ.