ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತವರೂರಿನಲ್ಲಿ ಎಲ್ಲಾ ಸ್ಥಾನಗಳು ಬಿಜೆಪಿ ಅಭ್ಯರ್ಥಿಗಳ ಪಾಲಾಗಿವೆ. ಶಾಸಕರ ತವರೂರಲ್ಲಿ ಎಲ್ಲ ಸ್ಥಾನಕ್ಕೂ ಬಿಜೆಪಿ ಬೆಂಬಲಿತರ ಆಯ್ಕೆಯಾಗಿದ್ದಾರೆ.

ಈವರೆಗೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯನ್ನು ಮಾಡಲಾಗಿದೆ. ಧಾರವಾಡ ತಾಲೂಕಿನ ಹಂಗರಕಿಯ ಈ ಒಂದು ಗ್ರಾಮವು ಬಿಜೆಪಿ ಶಾಸಕ ಅಮೃತ ದೇಸಾಯಿ ತವರೂರು. ಇದೇ ಮೊದಲ ಬಾರಿಗೆ ಚುನಾವಣೆಯನ್ನು ಗ್ರಾಮಸ್ಥರು ನಡೆಸಿದ್ದರು.ಪ್ರತಿ ಸಲ ನಡೆಯುತ್ತಿದ್ದ ಅವಿರೋಧ ಆಯ್ಕೆ ಬದಲಿಗೆ ಈಬಾರಿ ಚುನಾವಣೆ ಮಾಡಲು ಮಾಡಿದರು.

ಇದೇ ಮೊದಲ ಬಾರಿಗೆ ಅವಿರೋಧ ಆಯ್ಕೆ ಬಿಟ್ಟು ಚುನಾವಣೆಗಿಳಿದಿದ್ದ ಗ್ರಾಮಸ್ಥರು. ಆರು ಸ್ಥಾನಗಳಿಗೆ ನಡೆದಿದ್ದ ಫೈಟ್ ನಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.ಆರು ಸ್ಥಾನಕ್ಕೆ 12 ಅಭ್ಯರ್ಥಿಗಳು ಕಣದಲ್ಲಿದ್ದರು.ಬಿಜೆಪಿ ಬೆಂಬಲಿತರು ಮತ್ತು ಕೈ ಬೆಂಬಲಿತರ ಮಧ್ಯೆ ನಡೆದಿದ್ದ ನೇರಾ ನೇರ ಸ್ಪರ್ಧೆಯಲ್ಲಿ ಕೊನೆಗೂ ಬಿಜೆಪಿ ಬೆಂಬಲಿತ ಅದರಲ್ಲೂ ಧಣಿಯರ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಮೂಲಕ ತವರೂರಿನಲ್ಲಿ ಸಂಪೂರ್ಣವಾಗಿ ಬಿಜೆಪಿ ಅಬ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ. ಇನ್ನೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿಯವರು ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಒಳ್ಳೇಯ ಕೆಲಸ ಕಾರ್ಯಗಳ ಮೂಲಕ ಮತದಾರರ ಗ್ರಾಮದ ಅಭಿವೃದ್ದಿ ಮಾಡುವಂತೆ ಹೇಳಿ ಶುಭ ಹಾರೈಸಿದ್ದಾರೆ.