ಬೆಳಗಾವಿ –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ಕಗ್ಗಂಟಾಗುತ್ತಿದೆ. ಮತ್ತೊಂದು ಕಡೆಗೆ ಯಾವ ದಾರಿಯೂ ಸಿಗದೇ ಶಿಕ್ಷಕರು ಪರದಾಡುತ್ತಿದ್ದಾರೆ. ನಾಡಿನ ಮೂಲೆ ಮೂಲೆಗಳಲ್ಲಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ಹೇಗಾದರೂ ಮಾಡಿ ವರ್ಗಾವಣೆ ವಿಚಾರದಲ್ಲಿ ಏನೇಲ್ಲಾ ಕಸರತ್ತನ್ನು ಮಾಡುತ್ತಿದ್ದಾರೆ.ಮಾಡಲೇಬೇಕು ಎನ್ನುತ್ತಾ ಏನೇಲ್ಲಾ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ.
ಇನ್ನೂ ಇತ್ತ ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರು ಮಾತ್ರ ಮೌನ ಮೌನ.ತುಟಿ ಬಿಚ್ಚುತ್ತಿಲ್ಲ ಮಾತನಾಡುತ್ತಿಲ್ಲ ಹೀಗಾಗಿ ನಾವು ಮಾಡಿದ್ದೇ ಆಟ ಎಂದುಕೊಂಡು ಶಿಕ್ಷಕರ ಮೂಗಿಗೆ ತುಪ್ಪವನ್ನು ಸವ ರುತ್ತಾ ಗೇಮ್ ಆಡುತ್ತಾ ಹೊರಟಿದ್ದಾರೆ.
ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆ ಬೆಳಗಾವಿಯಲ್ಲಿ ಇಂದು ನಡೆಯಿತು. ಸಾಮಾನ್ಯವಾಗಿ ಸಭೆ ಅಂದಾ ಕ್ಷಣ ಸಧ್ಯದ ಇಂತಹ ಪರಸ್ಥಿತಿಯಲ್ಲಿ ಯಾವುದಕ್ಕೂ ಅವಕಾಶವನ್ನು ಕೊಡದೇ ನೇರವಾಗಿ ಸಭೆಯನ್ನು ಮಾಡಿ ಸಧ್ಯದ ಪರಸ್ಥಿತಿಯಲ್ಲಿ ಶಿಕ್ಷಕರು ಅನುಭವಿ ಸುತ್ತಿರುವ ಸಮಸ್ಯೆಗಳ ಕುರಿತಂತೆ ಹಾಗೇ ಮುಂದೇ ಏನು ಮಾಡಬೇಕು ಹೀಗೆ ಹಲವಾರು ವಿಚಾರಗಳ ಕುರಿತಂತೆ ಗಂಭೀರವಾಗಿ ಚರ್ಚೆ ಚಿಂತನ ಮಂಥನ ಮಾಡಬೇಕಿತ್ತು
ಆದರೆ ಇದೇಲ್ಲವನ್ನು ಬದಿಗಿಟ್ಟು ಮರೆತು ಕೊರೋ ನಾ ಸಂದರ್ಭದಲ್ಲಿ ಕೊರೋನಾ ರೂಲ್ಸ್ ಗಳನ್ನೇ ಮರೆತು ಆಡಂಬರದ ಕಾರ್ಯಕ್ರಮ ಮಾಡಿದ್ದು ಸಧ್ಯ ನಾಡಿನ ಶಿಕ್ಷಕರ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಹೌದು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಸಹಯೋಗದೊಂದಿಗೆ ಬೆಳಗಾವಿಯಲ್ಲಿ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯನ್ನು ಇಂದು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಆಗಿದ್ದು ಒಂದು ಕಡೆಯಾದರೆ ಇನ್ನೂ ರಾಜ್ಯದ ಮೂಲೆ ಮೂಲೆಗಳಲ್ಲಿ ನೂರಾರು ಶಿಕ್ಷಕರು ವರ್ಗಾವಣೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಇನ್ನೂ ಕೆಲ ವೊಂದಿಷ್ಟು ಶಿಕ್ಷಕರು ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದರು.
ಸರ್ಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲದೇ ರಸ್ತೆಯ ಮೇಲೆ ರಾಜಕಾರಣಿಗಳಂತೆ ಚೀರಾಡುತ್ತಾ ಕೂಗಾಡುತ್ತಾ ಜಯಘೋಷಗಳನ್ನು ಹಾಕಿದ್ದಲ್ಲದೆ ಬಹಿರಂಗವಾಗಿ ಆಯ್ಕೆಯಾದ ಪದಾಧಿಕಾರಿಗ ಳೊಂದಿಗೆ ರಾಜ್ಯದ ಅಧ್ಯಕ್ಷರು ಪ್ರಧಾನ ಕಾರ್ಯ ದರ್ಶಿಗಳು ಸೇರಿ ತೆರದ ವಾಹನ ದಲ್ಲಿ ರಸ್ತೆಯ ಉದ್ದಕ್ಕೂ ಮೆರವಣಿಗೆ ಮಾಡುತ್ತ ರಾಜಕೀಯ ಪಕ್ಷದವರನ್ನು ಮೀರಿಸಿದ್ದಾರೆ
ಸಾರ್ವಜನಿಕರು ಶಿಕ್ಷಕರ ಮೇಲಿನ ಆಕ್ರೋಶವನ್ನು ಈ ಮೂಲಕ ವ್ಯಕ್ತಪಡಿಸಿದರು ರಾಜಕೀಯ ಸಮಾ ರಂಭಗಳನ್ನೆ ಮಿರಿಸುವ ಹಾಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಯ ನ್ನು ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಒಟ್ಟಾರೆಯಾಗಿ ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರೆ ಈ ರೀತಿ ಮಾಡಿದರೆ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿ ದ್ದು ಒಂದು ಕಡೆಯಾದರೆ
ಇನ್ನೂ ಪ್ರಮುಖವಾಗಿ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಅವೇಲ್ಲವುಗಳ ಬಗ್ಗೆ ಕಾರ್ಯಕಾರಣಿ ಸಭೆಯಲ್ಲಿ ಬೆಳಕನ್ನು ಚೆಲ್ಲದೇ ಕೆಲವೊಂದಿಷ್ಟು ನಿರ್ಣಯಗ ಳನ್ನು ತಗೆದುಕೊಳ್ಳದೇ ಹೀಗೆ ಮಾಡಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದ್ದು ನಾಡಿನ ಮೂಲೆ ಮೂಲೆಗಳಲ್ಲಿ ಅಪಾರ ನಿರೀಕ್ಷಯನ್ನಿಟ್ಟುಕೊಂಡಿದ್ದ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ.