ಧಾರವಾಡ –
ವ್ಯಾಕ್ಸಿನ ತಗೆದುಕೊಂಡು ಹೊರಟಿದ್ದ ಅಂಬ್ಯೂಲೆನ್ಸ್ ವಾಹನವೊಂದು ಅಪಘಾತಕ್ಕಿಡಾ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದಿಂದ ಕಲಘಟಗಿ ಕಡೆಗೆ ಈ ಒಂದು ವಾಹನ ಹೊರಟಿತ್ತು ಇನ್ನೂ ಚಾಲಕ ಸದಾನಂದ ಬಾಬಜಿ ವಾಹನವನ್ನು ಚಲಾವಣೆ ಮಾಡುತ್ತಿದ್ದನು ಕಂಠಪೂರ್ತಿಯಾಗಿ ಮಧ್ಯ ಸೇವನೆ ಮಾಡಿದ್ದನಂತೆ ಇವನು ಟೋಲ್ ಗೇಟ್ ಬಳಿ ನಿಯಂತ್ರಣವನ್ನು ತಪ್ಪಿ ತೆಗ್ಗಿಗೆ ವಾಹನವನ್ನು ಹಾಕಿದ್ದಾನೆ.

ಇನ್ನೂ ಸ್ಧಳದಲ್ಲಿದ್ದ ಜಿಲಾನಿ ಖಾಜಿ ಸಿದ್ದು, ಮಂಜು, ಅರುಣ, ಕೂಡಲೇ ಅಪಘಾತವನ್ನು ನೋಡಿ ಚಾಲಕನನ್ನು ವಿಚಾರಣೆ ಮಾಡಿದಾಗ ಮಧ್ಯ ಸೇವನೆ ವಿಚಾರ ಗಮನಿಸಿ ಕೂಡಲೇ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ ನಂತರ ಬೇರೆ ಅಂಬ್ಯೂಲೆನ್ಸ್ ಮೂಲಕ ವಾಕ್ಸಿನ್ ಗಳನ್ನು ಕಳುಹಿಸಿಕೊಟ್ಟರು.ಇನ್ನೂ ಇತ್ತ ಜಿಲಾನಿ ಖಾಜಿ ಮತ್ತು ಗೆಳೆಯರ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಜವಾಬ್ದಾರಿ ಇಲ್ಲದೇ ವಾಹನವನ್ನು ಚಲಾವಣೆ ಮಾಡಿದ ಸದಾನಂದ ಈಗ ಮತ್ತೆ ಕರ್ತವ್ಯಕ್ಕೆ ಎಂದಿನಂತೆ ಏನು ಆಗಿಲ್ಲ ಎಂಬಂತೆ ಹಾಜರಾಗಿದ್ದು ದುರಂತವೇ ಸರಿ.