ಮುಂಬೈ –
ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಬೆದರಿಕೆ ಹಾಕಲಾಗಿದೆ. ದೇಶದಲ್ಲಿ ದಿನ ದಿನ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ದರದ ವಿರುದ್ಧ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸಿನೆಮಾ ತಾರೆಯರು ಇದರ ವಿರುದ್ಧ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಅಮಿತಾಬ್ ಬಚ್ಚನ್ ಅವರ ಧೋರಣೆ ಖಂಡಿಸಿ ಅವರ ಚಿತ್ರೀಕರಣಕ್ಕೆ ಕೂಡ ಅಡ್ಡಿಪಡಿಸಲಾಗುವುದು ಎಂದು ಪಟೋಲೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಅಮಿತಾಬ್ ಬಚ್ಚನ್ ನಿವಾಸದ ಮುಂದೆ ಭದ್ರತೆ ಹೆಚ್ಚಿಸಲಾಗಿದೆ.
ಅಷ್ಟೇ ಅಲ್ಲದೆ, ಅಕ್ಷಯ್ ಕುಮಾರ್ ವಿರುದ್ದವೂ ಕಿಡಿ ಕಾರಿ ಎಲ್ಲ ನಟರೂ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಎಂದು ನಾನಾ ಪಟೋಲೆ ಟೀಕಿಸಿದ್ದಾರೆ. ಹೀಗಾಗಿ ಇವರಿಗೆ ಸೇರಿದಂತೆ ಹಲವು ನಟರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ