ಹುಬ್ಬಳ್ಳಿ –
ಕಳೆದ 15 ವರ್ಷಗಳಿಂದ ನಾಡು ನುಡಿ ವಿಚಾರದಲ್ಲಿ ಏನಾದರೂ ಅನ್ಯಾಯವಾದಾಗ ಗಂಡು ಮೆಟ್ಟಿನ ನೆಲ ಹುಬ್ಬಳ್ಳಿಯಿಂದ ಧ್ವನಿ ಎತ್ತುತ್ತಾ ಹೋರಾಟ ಮಾಡಿ ಸಾಲದಂತೆ ಸಾಕಷ್ಟು ಪ್ರಕರಣಗಳನ್ನು ಹಾಕಿಸಿಕೊಂಡು ಹೋರಾಟ ಮಾಡುತ್ತಿದ್ದ ನಾಯಕ ರಲ್ಲಿ ಹುಬ್ಬಳ್ಳಿಯ ಮಂಜುನಾಥ ಲೂತಿಮಠ ಕೂಡಾ ಒಬ್ಬರು.

ಹುಬ್ಬಳ್ಳಿಯ ನಿವಾಸಿಯಾಗಿರುವ ಇವರು ಕಳೆದ 15 ವರ್ಷಗಳಿಂದ ಕರವೇ ಸಂಘಟನೆಯ ಮುಖಂಡರಾ ಗಿದ್ದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಒಳ್ಳೋ ಳ್ಳೆಯ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಮಾಡಿದ ಇವರು ಈಗ ಜನ ಸೇವೆಗೆ ಮುಂದಾಗಿದ್ದಾರೆ

ಕಳೆದ ಬಾರಿ ಅಲ್ಪ ಮತಗಳಿಂದ ಪರಾಭವಗೊಂ ಡಿದ್ದ ಇವರು ಈಗ ಹುಬ್ಬಳ್ಳಿ ಧಾರವಾಡ ಮಹಾನ ಗರ ಪಾಲಿಕೆಯ ವಾರ್ಡ್ 68 ರ ಪಕ್ಷೇತರ ಅಭ್ಯರ್ಥಿ ಯಾಗಿ ಅಖಾಡಕ್ಕೆ ಇಳಿದಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಕೆಲವೊಂದಿಷ್ಟು ಒಳ್ಳೇಯ ವಿಚಾರ ಕೆಲಸಗಳನ್ನು ಯೋಜನೆಗಳನ್ನು ಮುಂದಿಟ್ಟುಕೊಂಡು ಹೊಸ ಕನಸು ಹೊಸ ಹೊಸ ಯೋಜನೆಗಳೊಂದಿಗೆ ಸ್ಪರ್ಧೆ ಮಾಡಿದ್ದಾರೆ.

ಸಧ್ಯ ಅಬ್ಬರದ ಪ್ರಚಾರದಲ್ಲಿ ಇವರು ತೊಡಗಿದ್ದಾರೆ. ಮನೆ ಮನೆ ಗೆ ತೆರಳಿ ಪಾದಯಾತ್ರೆ ಮೂಲಕ ಬಿಡು ವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದು ಹೋದೆಲೆಲ್ಲ ಉತ್ತಮವಾದ ರಿಸ್ಪಾನ್ಸ್ ಕೂಡಾ ಕಂಡು ಬರುತ್ತಿದ್ದು

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಮನೆ ಮಗನಾಗಿರುವ ನೀವೆ ನಮಗೆ ಬೆಸ್ಟ್ ಎನ್ನುತ್ತಾ ಈ ಬಾರಿ ನಮ್ಮ ಮತ ನಿಮಗೆ ಎನ್ನುತ್ತಾ ಬೆನ್ನು ತಟ್ಟಿ ಕಳಿಸುತ್ತಿದ್ದಾರೆ.

ಹೀಗಾಗಿ ವಾರ್ಡ್ ನಲ್ಲಿ ಈ ಬಾರಿ 68ನೇ ಅಭ್ಯರ್ಥಿಯಾಗಿರುವ ಮಂಜುನಾಥ ಲೂತಿಮಠ ಅವರೇ ಬೆಸ್ಟ್ ಎಂದು ಮತದಾರರು ತಿರ್ಮಾನವನ್ನು ಮಾಡಿದ್ದಾರೆ.