ಧಾರವಾಡ –
ಸಾರಿಗೆ ಬಸ್ ಮತ್ತು ಕಂಟೇನರ್ ನಡುವೆ ಅಪಘಾತ ಸಂಭವಿಸಿದ ಘಟನೆ ಧಾರವಾಡದ ಟೋಲ್ ನಾಕಾದಲ್ಲಿ ನಡೆದಿದೆ.
ಬೆಳಗಾವಿ ಯಿಂದ ಧಾರವಾಡ ಗೆ ಬಂದು ಧಾರವಾಡ ದಿಂದ ಬೈಪಾಸ್ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಗೆ ಮಿನಿ ಕಂಟೇನರ್ ಡಿಕ್ಕಿ ಹೊಡೆದಿದೆ.
ಇನ್ನೂ ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಕಂಟೇನರ್ ಬರುತ್ತಿತ್ತು. ಟೋಲ್ ನಾಕಾದಲ್ಲಿ ಬಸ್ ಗೆ ಕಂಟೇನರ್ ಏಕಾಏಕಿಯಾಗಿ ಡಿಕ್ಕಿಯಾಗಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಬಸ್ ಸ್ವಲ್ಪ ಮಟ್ಟಿಗೆ ಡ್ಯಾಮೆಜ್ ಆಗಿದೆ.ಇನ್ನೂ ಕಂಠ ಪೂರ್ತಿಯಾಗಿ ಕಂಟೇನರ್ ಚಾಲಕ ಕುಡಿದ್ದಿದ್ದು ಅಪಘಾತಕ್ಕೆ ಕಾರಣವಂತೆ.
ಸಧ್ಯ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂಟೇನರ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.