ಧಾರವಾಡ –
ಎರಡು ಕಾರುಗಳ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಹುಬ್ಬಳ್ಳಿಯ ರಸ್ತೆಯ NTTF ಮುಂದೆ ಈ ಒಂದು ಅಪಘಾತ ಸಂಭವಿಸಿದೆ.
ಧಾರವಾಡದಿಂದ ಹುಬ್ಬಳ್ಳಿಯ ಕಡೆಗೆ ಎರಡು ಕಾರುಗಳು ಹೊರಟಿದ್ದವು.ಚಿಗರಿ ಬಸ್ ಬಂತು ಅಂತಾ ನಿಂತುಕೊಂಡು ನಂತರ ಹೊರಟವು ಅಷ್ಟೇ ಇನ್ನೊಂದು ಕಾರು ಕೂಡಾ ಬಂದು ಎರಡು ಕಾರುಗಳು ಡಿಕ್ಕಿಯಾಗಿವೆ.
ಅಪಘಾತದಲ್ಲಿ ಎರಡು ಕಾರುಗಳ ಮುಂದಿನ ಭಾಗ ಸಂಪೂರ್ಣವಾಗಿ ಜಖಂ ಆಗಿದ್ದು ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಕಾರುಗಳು ಅಷ್ಟೇ ಡ್ಯಾಮೆಜ್ ಆಗಿವೆ.
ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸ ಠಾಣೆಯ ASI S B ಶಿಂಧೆ,ಸಿಬ್ಬಂದಿ ಗಳಾದ ಅಮರಗೋಳ, B S ಹವಾಲ್ದಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.