ಚಿಕ್ಕೊಡಿ –
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದೆ. ಹೌದು ಜಿಲ್ಲೆಯ ಅಥಣಿ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಕೂಗಳತೆಯ ದೂರದಲ್ಲಿ ಭೀಕರ ಅಪಘಾತವೊಂದು ನಡೆದಿದೆ.

ಸಾಮಾನ್ಯವಾಗಿ ಅಪಘಾತವಾದ್ರೆ ವಿಷಯ ತಿಳಿದು ಆಸ್ಪತ್ರೆಯಲ್ಲಿನ ಅಂಬೂಲೆನ್ಸ್ ಗಳು ಸ್ಥಳಕ್ಕೇ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆದರೆ ಇಲ್ಲಿ ಆಗಿದ್ದೇ ಬೇರೆ. ಅಪಘಾತವಾದ್ರೂ ನೋಡಿ ನೋಡಲಾರದಂತಹ ಪರಸ್ಥಿತಿಯಲ್ಲಿ ಎರಡು ಅಂಬುಲೆನ್ಸ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಅಂಬೂಲೆನ್ಸ್ ಗಳು ಇದ್ದರೂ ಸ್ಥಳಕ್ಕೆ ಬರಲಿಲ್ಲ. ಎಷ್ಟೇ ಹೇಳಿದರೂ ಗೊಗರೆದರೂ ಕೂಡಾ ಬರಲೆ ಇಲ್ಲ. ಕೊನೆಗೆ ಗಾಯಾಳುಗಳನ್ನು ಸಾರ್ವಜನಿಕರೇ ಹೊತ್ತೊಯ್ದು ಪ್ರಾಣ ಉಳಿಸಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಆಸ್ಪತ್ರೆಯಿಂದ ಎರಡುನೂರು ಮೀಟರ್ ಅಂತರದಲ್ಲಿ ಈ ಒಂದು ಅಪಘಾತವಾಗಿದೆ. ಎರಡು ಬೈಕ್ ಮತ್ತು ಟಿಪ್ಪರ ಮದ್ಯೆ ನಡೆದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವಿಗೀಡಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಾಳುಗಳನ್ನು ಎತ್ತಿಕೊಂಡು ಓಡಿ ಬಂದು ಆಸ್ಪತ್ರೆ ಸೇರಿಸಿದ ಸಾರ್ವಜನಿಕರು ಮಾನವೀಯತೆ ಮೆರೆದು ಆಸ್ಪತ್ರೆ ಅಂಬ್ಯೂಲೆನ್ಸ್ ಸಿಬ್ಬಂದಿ ವಿರುದ್ದ ಹಿಡಿಶಾಪ ಹಾಕಿದರು.