ಹುಬ್ಬಳ್ಳಿ –
ಹಿಂಗಾರು ಬೆಳೆಯಾದ ಕುಸುಬಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 112 ರೂ. ಹೆಚ್ಚಿಸಿ ಪ್ರತಿ ಕ್ವಿಂಟಲ್ ಗೆ 5327 ರೂ. ಬೆಂಬಲ ಬೆಲೆ ನಿಗದಿ ಪಡಿಸಿದ್ದು ಕೂಡಲೇ ತಾಲೂಕಿನಲ್ಲಿ ಕುಸುಬಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಹುಬ್ಬಳ್ಳಿ ತಾಲೂಕು ರೈತ ಸಂಘದ ಸದಸ್ಯರು ಭಾನುವಾರ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು.
ಅತಿವೃಷ್ಠಿಯಿಂದ ಮುಂಗಾರು ಬೆಳೆ ನಾಶಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಗಾರು ಬೆಳೆಯಾದ ಕುಸುಬಿ ಅಲ್ಪ ಸ್ವಲ್ಪ ಬೆಳೆ ಬಂದಿದ್ದರಿಂದ ಹಾಗೂ ಕೇಂದ್ರ ಸರ್ಕಾರ ಎಂ.ಎಸ್.ಪಿ. ದರದಲ್ಲಿ ಕುಸುಬಿ ಖರೀದಿಗೆ ಮುಂದಾಗಿರುವುದರಿಂದ ಕೂಡಲೇ ಹುಬ್ಬಳ್ಳಿಯ ಅಮರಗೋಳದ ಎ.ಪಿ.ಎಂ.ಸಿ ಯಲ್ಲಿ ಕುಸುಬಿ ಖರೀದಿ ಕೇಂದ್ರ ಆರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ದರು.ರೈತರ ಮನವಿ ಸ್ವೀಕರಿಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರು, ಶೀಘ್ರದಲ್ಲೇ ಜಿಲ್ಲಾಧಿಕಾರಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ಕುಸುಬಿ ಖರೀದಿ ಕೇಂದ್ರ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ,
ರೈತ ಸಂಘದ ಅಧ್ಯಕ್ಷ ಪರುತಪ್ಪ ಬಳಗಣ್ಣವರ, ಸದಸ್ಯರಾದ ನಿಂಗನಗೌಡ್ರ ಪಾಟೀಲ, ಚನ್ನಬಸಪ್ಪ ಅಸುಂಡಿ, ಸಿದ್ದಪ್ಪ ಮೇಟಿ, ಫಕ್ಕೀರಪ್ಪ ಕಲ್ಲಣ್ಣವರ, ಹನಮಂತಗೌಡ್ರ ಪಾಟೀಲ, ಕುಮಾರಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ,ವೀರಣ್ಣ ಶಿಂತ್ರಿ, ವಿ.ಐ. ಪಾಟೀಲ, ಶಂಕ್ರಪ್ಪ ಅಸುಂಡಿ, ಎಂ. ಕುಂದನ ಹಳ್ಳಿ, ಇತರರು ಇದ್ದರು.